ಯುವಕನೋರ್ವ ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ದೇರಳಕಟ್ಟೆ ಕಾನೆಕೆರೆ ಎಂಬಲ್ಲಿ ಇಂದು ನಸುಕಿನ ಜಾವ ಸಂಭವಿಸಿದೆ.

ದೇರಳಕಟ್ಟೆ ಕಾನೆಕೆರೆ ನಿವಾಸಿ ಶಿವಾನಂದ ರೆಡ್ಡಿ ಎಂಬವರ ಪುತ್ರ 25 ವರ್ಷದ ವಿನಯ್ ಕುಮಾರ್ ಹೃದಯಾಘಾತಕ್ಕೀಡಾಗಿ ಸಾವನ್ನಪ್ಪಿದ್ದಾರೆ. ನಸುಕಿನ ಜಾವ ಹೃದಯ ಭಾಗದಲ್ಲಿ ನೋವುಂಟಾಗಿದ್ದು, ಕೆಲ ಕ್ಷಣಗಳಲ್ಲೇ ವಿನಯ್ ಸಾವನ್ನಪ್ಪಿದ್ದಾರೆ. ನಡುಪದವು ಖಾಸಗಿ ಶಿಕ್ಷಣ ಸಂಸ್ಥೆಯಲ್ಲಿ ವಿನಯ್ ಉದ್ಯೋಗದಲ್ಲಿದ್ರು. ಶಬರಿಮಲೆ ಯಾತ್ರೆಗೆ ತೆರಳುವ ಸಂದರ್ಭ ಕಾಲಿಗೆ ಕಲ್ಲು ಚುಚ್ಚಿ, ಸೆಪ್ಟಿಕ್ ಆಗಿ ಬೆರಳನ್ನು ಕತ್ತರಿಸಲಾಗಿತ್ತು. ಈ ಹಿಂದೆ ದಪ್ಪ ಶರೀರವನ್ನು ಹೊಂದಿದ್ದ ವಿನಯ್ ಡಯೆಟಿಂಗ್ ಮೂಲಕ ತೂಕವನ್ನು ಇಳಿಸಿದ್ರು. ದೇರಳಕಟ್ಟೆ ಅಯ್ಯಪ್ಪ ದೇವಸ್ಥಾನದಲ್ಲಿ ತನ್ನನ್ನು ಸಕ್ರಿಯವಾಗಿ ವಿನಯ್ ತೊಡಗಿಸಿಕೊಂಡಿದ್ದು, ತಂದೆ ಶಿವಾನಂದ ರೆಡ್ಡಿಯವರು ಭಜನಾ ಸಂಕೀರ್ತನೆಯಲ್ಲಿ ಸಕ್ರಿಯ ಹಾರ್ಮೋನಿಯಂ ವಾದಕರಾಗಿದ್ರು. ಅದಲ್ಲದೇ ಉಚಿತವಾಗಿ ಮಕ್ಕಳಿಗೆ ಹಾರ್ಮೋನಿಯಂ ಕಲಿಸಿಕೊಡುತ್ತಿದ್ದಾರೆ. ಬಳ್ಳಾರಿ ಮೂಲದವರಾಗಿರುವ ಕುಟುಂಬ ಕಳೆದ 25 ವರ್ಷಗಳಿಂದ ದೇರಳಕಟ್ಟೆ ಕಾನೆಕೆರೆಯಲ್ಲಿ ವಾಸವಿದ್ರು. ಮೃತ ವಿನಯ್, ತಂದೆ, ತಾಯಿ ಹಾಗೂ ಇಬ್ಬರು ಸಹೋದರಿಯರನ್ನು ಅಗಲಿದ್ದಾರೆ.



