ಮುಲ್ಕಿ: ಯುವವಾಹಿನಿ ಘಟಕದ ಆಶ್ರಯದಲ್ಲಿ 21ನೇ ವರ್ಷದ ಆಟಿದೊಂಜಿ ದಿನ ಕಾರ್ಯಕ್ರಮವು ಭಾನುವಾರ ಬೆಳಿಗ್ಗೆ ಮುಲ್ಕಿ ಬಿಲ್ಲವ ಸಂಘದ ಸಭಾಗೃಹದಲ್ಲಿ ನಡೆಯಿತು.

ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಯುವವಾಹಿನಿ ಮೂಲ್ಕಿ ಘಟಕದ ಅಧ್ಯಕ್ಷ ಮಾಧವ ಪೂಜಾರಿ ಕಿಲ್ಪಾಡಿ ವಹಿಸಿದ್ದರು.
ಕಾರ್ಯಕ್ರಮವನ್ನು ಉದ್ಯಮಿ ಶೈಲೇಂದ್ರ ವೈ ಸುವರ್ಣ ರವರು ಹಿಂದಿನ ಕಾಲದ ನಿರ್ಮಾಣಗೊಂಡ ಅಡುಗೆ ಕೋಣೆಯ ಒಳಗಡೆ ಒಲೆಯಲ್ಲಿಟ್ಟ ಪಾತ್ರೆಯಲ್ಲಿ ಬೆಂದ ಹಲಸಿನ ಗಟ್ಟಿಯನ್ನು ಅತಿಥಿಗಳಿಗೆ ನೀಡುವ ಮೂಲಕ ಉದ್ಘಾಟಿಸಿ ಮಾತನಾಡಿ ಸಂಘಟನೆಗಳ ಯಶಸ್ವಿ ಕಾರ್ಯಕ್ರಮಗಳಿಗೆ ಹಿರಿಯರ ಶ್ರಮ ಅಪಾರವಾಗಿದ್ದು ಮುಲ್ಕಿಯ ಯುವ ವಾಹಿನಿ ಸಂಘಟನೆಯು ಬ್ರಹ್ಮಶ್ರೀ ನಾರಾಯಣ ಗುರುಗಳ ತತ್ವ ಆದರ್ಶಗಳನ್ನು ಪಾಲಿಸಿಕೊಂಡು ಯುವ ಜನಾಂಗವನ್ನು ಸಂಘಟಿಸಿ ಸಮಾಜದ ಅಭಿವೃದ್ಧಿಗೆ ಕೊಡುಗೆ ಶ್ಲಾಘನೀಯ ಎಂದರು.

ತುಳು ಚಿತ್ರ ರಂಗದ ಕಲಾವಿದ ಭೋಜರಾಜ್ ವಾಮಂಜೂರು ರವರು ಮಾತನಾಡಿ ಮುಲ್ಕಿ ಯುವವಾಹಿನಿ ಘಟಕವು ಹಿಂದಿನ ಕಾಲದ ಪರಂಪರೆ, ಸಂಸ್ಕಾರ ಸಂಸ್ಕೃತಿ ಉಳಿಸಿಕೊಂಡು ಸಮಾಜದಲ್ಲಿ ಅಸಹಾಯಕರಿಗೆ ಸಹಾಯ ಹಸ್ತದ ಮೂಲಕ ಉತ್ತಮ ಕಾರ್ಯಕ್ರಮಗಳು ಅಭಿನಂದನೀಯ ಎಂದರು.
ಆಟಿಯ ಆಚರಣೆ ಕುರಿತು ಮಂಗಳೂರಿನ ಸಂತ್ ಅಗ್ನೇಸ್ ಕಾಲೇಜಿನ ಉಪನ್ಯಾಸಕ ಡಾ.ಅರುಣ್ ಉಳ್ಳಾಲ್ ಉಪನ್ಯಾಸ ನೀಡಿದರು.
ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ ಯುವವಾಹಿನಿ ಕೇಂದ್ರ ಸಮಿತಿಯ ಅಧ್ಯಕ್ಷ ರಾಜೇಶ್ ಬಿ,ಲಯನ್ಸ್ ಕ್ಲಬ್ ಬಪ್ಪನಾಡು ಇನ್ಸ್ಪಯರ್ ನ ಸ್ಥಾಪಕ ಅಧ್ಯಕ್ಷ ವೆಂಕಟೇಶ್ ಹೆಬ್ಬಾರ್,ಮುಲ್ಕಿ ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ಎಂ ಪ್ರಕಾಶ್ ಸುವರ್ಣ ಮತ್ತಿತರರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ತುಳು ಚಿತ್ರ ನಿರ್ಮಾಪಕ ಸಂದೇಶ್ ರಾಜ್ ಬಂಗೇರರನ್ನು ಸನ್ಮಾನಿಸಲಾಯಿತು.
ಆಟಿಯ ಆಚರಣೆಗೆ ಬಂದ ಅತಿಥಿಗಳಿಗೆ ಅರೆಪುದಡ್ಡೆ, ಚಾ, ಬಾಯಿ ಬಚ್ಚೆಲ್, ಕಡ್ಲೆ, ಹಪ್ಪಳ, ಮಧ್ಯಾಹ್ನ ಆಟಿದ ಅಟಿಲ್‌ನಲ್ಲಿ ಕುಕ್ಕುದ ಉಪ್ಪಡ್, ತಿಮರೆ ಚಟ್ನಿ, ಉಪ್ಪಡ್ ಪಚ್ಚೀರ್, ಕುಡುತ್ತ ಚಟ್ನಿ, ಕುಕ್ಕುದ ಚಟ್ನಿ, ತೊರ್ಜಕ್ ನುರ್ಗೆ ಸೊಪ್ಪು, ತೇವು ತೇಟ್ಲ, ಕುಡುತ ಸಾರ್, ತೇವು ಪದ್ಪೆ, ಪೆಲಕಾಯಿದ ಗಟ್ಟಿ, ಮೆತ್ತೆದ ಗಂಜಿಯ ತಿನಿಸುಗಳು ಹಾಗೂ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಆಟಿಯ ಸಂಭ್ರಮ ಕ್ಕೆ ಸಾಕ್ಷಿಯಾಯಿತು. ಚಲನಚಿತ್ರ ನಟ ಭೋಜರಾಜ ವಾಮಂಜೂರು ತುಳು ಪದ್ಯ ಹಾಡಿ ಮನರಂಜನೆ ನೀಡಿದರು.




