ಪುತ್ತೂರಿನ ದರ್ಬೆಯಲ್ಲಿ ಮುಖ್ಯ ರಸ್ತೆ ಬದಿಯ ವಾಣಿಜ್ಯ ಸಂಕೀರ್ಣವೊಂದರ ಪ್ರಥಮ ಮಹಡಿಯಲ್ಲಿರುವ ಎಲೆಕ್ಟ್ರಿಕಲ್ಸ್ ಅಂಗಡಿಯೊಂದರಲ್ಲಿ ಆಕಸ್ಮಿಕವಾಗಿ ಬೆಂಕಿ ಅವಘಡ ಸಂಭವಿಸಿದೆ.

ದರ್ಬೆಯ ರೇಗೋ ಬಿಲ್ಡಿಂಗ್ನ ಪ್ರಥಮ ಮಹಡಿಯಲ್ಲಿ ಕಾರ್ಯಚರಿಸುತ್ತಿರುವ ಕೆಮ್ಮಿಂಜೆ ಗ್ರಾಮದ ಬೆದ್ರಾಳ ನಿವಾಸಿ, ಕೆಮ್ಮಿಂಜೆ ಪಣ್ಮುಖ ಸುಬ್ರಹ್ಮಣ್ಯ-ಮಹಾವಿಷ್ಣು ದೇವಳದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ಕೇಶವ ಬೆದ್ರಾಳ ಎಂಬವರ ಮಾಲಕತ್ವದ ನಂದಿಕೇಶ್ವರ ಎಲೆಕ್ಟ್ರಿಕಲ್ಸ್ ಸಂಸ್ಥೆಯ ಸರ್ವಿಸ್ ವಿಭಾಗದಲ್ಲಿ ಮಂಗಳವಾರ ಮಧ್ಯಾಹ್ನ ದಟ್ಟ ಹೊಗೆಯೊಂದಿಗೆ ಬೆಂಕಿ ಕಾಣಿಸಿಕೊಂಡಿದೆ. ತಕ್ಷಣ ಸಂಸ್ಥೆಯ ನೌಕರರು ನೀಡಿದ ಮಾಹಿತಿಯಂತೆ ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ದಳದವರು ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸಿದರೆಂದು ತಿಳಿದು ಬಂದಿದೆ. ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದಾಗಿ ಬೆಂಕಿ ಹತ್ತಿಕೊಂಡಿರಬಹುದೆಂದು ಶಂಕಿಸಲಾಗಿದ್ದು, ಅಂಗಡಿಯೊಳಗಿದ್ದ ಹಲವು ಎಲೆಕ್ಟ್ರಿಕಲ್ಸ್ ಉಪಕರಣಗಳು ಮತ್ತು ಸಾಧನಗಳು ಸುಟ್ಟು ಹೋಗಿವೆ. ಘಟನೆಯಿಂದಾಗಿ ಸುಮಾರು ರೂ.3 ಲಕ್ಷದಷ್ಟು ನಷ್ಟ ಸಂಭವಿಸಿರುವುದಾಗಿ ಮಾಲಕ ಕೇಶವ ಬೆದ್ರಾಳ ಅವರು ತಿಳಿಸಿದ್ದಾರೆ.



