ರಾಜ್ಯ ಸರ್ಕಾರದ ದುರಾಡಳಿತದ ವಿರುದ್ಧ, ರಾಜ್ಯದ ಜನರ ಸಾಮಾಜಿಕ ಭದ್ರತೆಗೆ ಅಗ್ರಹಿಸಿ ಜೂನ್ 23ರಂದು ಸ್ಥಳೀಯಾಡಳಿತ ಕಚೇರಿಗಳ ಮುಂದೆ ಪ್ರತಿಭಟನೆ ನಡೆಸಲಾಗುವುದು ಎಂದು ದಕ್ಷಿಣ ಕನ್ನಡ ಸಂಸದ ಕ್ಯಾ.ಬ್ರಿಜೇಶ್ ಚೌಟ ಹೇಳಿದ್ದಾರೆ. 
ಇವರು ಬಿಜೆಪಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಜ್ಯ ಎಲ್ಲಾ ಗ್ರಾಮ ಪಂಚಾಯತ್, ನಗರ ಸಭೆ, ಪರ ಸಭೆ, ಪಟ್ಟಣ ಪಂಚಾಯತ್ ಮುಂಭಾಗ ಸ್ಥಳೀಯ ನಾಗರಿಕರನ್ನು ಸೇರಿಸಿ ರಾಜ್ಯ ಸರ್ಕಾರದ ದುರಾಡಳಿತದ ವಿರುದ್ಧ ಬಿಜೆಪಿ ಪ್ರತಿಭಟನೆ ನಡೆಸಲಿದೆ. ಕೆಡಿಪಿ ಸಭೆ, ವಿಧಾನ ಸಭೆ ಅಧಿವೇಶದಲ್ಲಿ ಮನವಿ ಮಾಡಿದ್ರೂ ಜನತೆಯ ಸಮಸ್ಯೆ ನಿವಾರಣೆಯಾಗುತ್ತಿಲ್ಲ. ನೈನ್‌ಲೆವೆನ್ ಅರ್ಜಿ ದೂಳು ಹಿಡಿಯುತ್ತಿದೆ. ಅಕ್ರಮ ನಕ್ರಮ ಯೋಜನೆಯ ನಿಯಮಗಳನ್ನು ಸರಳೀಕರಣಗೊಳಿಸದಿರುವುದು ನರ್ಕಾರದ ರೈತ ವಿರೋಧೀ ನಿಲುವಾಗಿದೆ. ಸರ್ಕಾರ ಏಕಪಕ್ಷೀಯ ನಿರ್ಧಾರ ತೆಗೆದುಕೊಳ್ಳುವುದು ನರಿಯಲ್ಲ ಎಂದು ಆರೋಪಿಸಿದ್ರು. ಕುಮ್ಮಿ ಭೂಮಿ ಉಳಿದಿದ್ದು ರೈತರಿಂದ. ಇಲ್ಲದೇ ಹೋಗಿದ್ದರೆ ಆ ಭೂಮಿ ಭೂಮಾಫಿಯಾಕ್ಕೆ ಹೋಗುತ್ತಿತ್ತು. ಆಶ್ರಯ ಮನೆ ಸಮಸ್ಯೆಯಿಂದ ಬಡವರಿಗೆ ಸೂರು ಸಿಗುತ್ತಿಲ್ಲ. ಬಿಜೆಪಿ ಸರ್ಕಾರ ಬಿಜೆಪಿ 100 ರಷ್ಟು ಮನೆ ಕೊಟ್ಟಿದೆ. ಆದರೆ ಕಾಂಗ್ರೆಸ್ ಎರಡು ವರ್ಷಗಳಿಂದ ಆಶ್ರಯ ಮನೆ ಕೊಟ್ಟಿಲ್ಲ. ಪ್ರತೀ ಪಂಚಾಯತ್ ವ್ಯಾಪ್ತಿಯಲ್ಲಿ ಕನಿಷ್ಠ 100 ಮನೆ ಕೊಡಬೇಕು ಎಂದು ಆಗ್ರಹಿಸಿದ್ದಾರೆ. ಇನ್ನು ಈ ಸಂದರ್ಭದಲ್ಲಿ ಸಭೆಯಲ್ಲಿ ಮುಖಂಡರಾದ ರವೀಂದ್ರ ಶೆಟ್ಟಿ ಉಳಿದೊಟ್ಟು, ಶಾಂತಿ ಪ್ರಸಾದ್ ಹೆಗ್ಡೆ, ಪೂರ್ಣಿಮಾ ಎಂ, ಪ್ರಭಾಕರ ಪ್ರಭು ಉಪಸ್ಥಿತರಿದ್ದರು.



