ಕರ್ನಾಟಕದಲ್ಲಿ ಕಾಂಗ್ರೆಸ್ ಸರಕಾರ ಆಡಳಿತಕ್ಕೆ ಬಂದ ನಂತರ ಪಂಚ ಗ್ಯಾರಂಟಿ ಯೋಜನೆ ಯಸಶ್ವಿಯಾಗಿ ಮುನ್ನಡೆಯುತ್ತಿದ್ದು ಇದರಿಂದ ಬಿಜೆಪಿ ವಿಚಲಿತಗೊಂಡಿದ್ದು ಮಾತ್ರವಲ್ಲದೆ ಗ್ಯಾರಂಟಿ ನೀಡಿದ್ದರಿಂದ ಇತರೆ ಅಭಿವೃದ್ದಿ ಕೆಲಸಗಳು ಆಗುತ್ತಿಲ್ಲ ಎಂಬ ಸುಳ್ಳು ಆರೋಪವನ್ನು ಮಾಡುತ್ತಿದೆ, ಕೇವಲ ಗೃಹಲಕ್ಷ್ಮಿ ಯೋಜನೆಯಿಂದ ಪ್ರತೀ ಕುಟುಂಬದ ಯಜಮಾನಿಯ ಖಾತೆಗೆ 42 ಸಾವಿರ ರೂ ಜಮೆಯಾಗಿದೆ ಎಂದು ಶಾಸಕ ಅಶೋಕ್ ರೈ ಹೇಳಿದ್ದಾರೆ.

ಅವರು ಮಾಡ್ನೂರು ಗ್ರಾಮದಲ್ಲಿ ಸುಮಾರು 1.66 ಕೋಟಿ ವಿವಿಧ ಕಾಮಗಾರಿಗಳ ಉದ್ಘಾಟನೆ ಮತ್ತು ಶಿಲಾನ್ಯಾಸ ನೆರವೇರಿಸಿದ ಬಳಿಕ ಕಾವು ಸಮುದಾಯ ಭವನದಲ್ಲಿ ನಡೆದ ಸಭೆಯಲ್ಲಿ ಮಾತನಾಡಿ ಕಾಂಗ್ರೆಸ್ ಸರಕಾರ ಬಂದ ಮೇಲೆ ಬಡವರು, ಮಧ್ಯಮವರ್ಗದ ಜನರು ನೆಮ್ಮದಿಯ ಜೀವನ ನಡೆಸುವಂತಾಗಿದೆ. ಏನಿಲ್ಲದಿದ್ದರೂ ತಿಂಗಳಿಗೆ ಬರುವ 2000 ರೂ ಗೃಹಲಕ್ಷ್ಮಿ ಹಣ ಮಹಿಳೆಯನ್ನು ಸ್ವಾವವಲಂಬಿಯನ್ನಾಗಿಸಿದೆ. ಜನತೆ ಅಭಿವೃದ್ದಿಯಾಗುತ್ತಿದ್ದಾರೆ, ಇನ್ನು ಕಾಂಗ್ರೆಸ್ ಪಕ್ಷ ನೆಮ್ಮದಿಯಲ್ಲಿರುವುದನ್ನು ಬಿಜೆಪಿಗೆ ಸಹಿಸಲು ಸಾಧ್ಯವಾಗುತ್ತಿಲ್ಲ ಈ ಕಾರಣಕ್ಕೆ ಪಂಚ ಗ್ಯಾರಂಟಿ ಯೋಜನೆಯ ಬಗ್ಗೆ ಅಪಪ್ರಚಾರ ಮಾಡುತ್ತಾ ಅದನ್ನು ರದ್ದು ಮಾಡಬೇಕು ಎಂದು ಒತ್ತಾಯವನ್ನು ಮಾಡುತ್ತಿದೆ ಎಂದು ಆರೋಪಿಸಿದ್ರು. ಇನ್ನು ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಜಿಪಂ ಮಾಜಿ ಸದಸ್ಯೆ ಅನಿತಾ ಹೇಮನಾಥ ಶೆಟ್ಟಿ, ಕೊಳ್ತಿಗೆ ಗ್ರಾಪಂ ಅಧ್ಯಕ್ಷೆ ಅಕ್ಕಮ್ಮ, ಪುಡಾ ಅಧ್ಯಕ್ಷರಾದ ಅಮಲರಾಮಚಂದ್ರ, ಸದಸ್ಯರಾದ ಲ್ಯಾನ್ಸಿ ಮಸ್ಕರೇನಸ್, ಸೇರಿದಂತೆ ಮತ್ತಿತರು ಉಪಸ್ಥಿತರಿದ್ದರು.



