ಈಗಾಗಲೇ ಇರಾನ್, ಇಸ್ರೇಲ್ ಹೊಡೆದಾಟ ಜೊರಾಗಿದ್ದು, ಇದೀಗ ಇರಾನ್ ವಿಶ್ವಕ್ಕೆ ಶಾಕ್ ಕೊಡಲು ಮುಂದಾಗಿದೆ.

ಹೌದು, ಒಡಲೊಳಗೆ ತೈಲವನ್ನೇ ತುಂಬಿಕೊಂಡು ಜಗತ್ತಿಗೆ ತೈಲ ಉಣಿಸುತ್ತಿರುವ ಪ್ರಮುಖ ರಾಷ್ಟ್ರಗಳಲ್ಲಿ ಇರಾನ್ ಕೂಡ ಒಂದು. ಇರಾನ್ನ ನ್ಯೂಕ್ಲಿಯರ್ ಪವರ್ ಹಾಗೂ ಸಂಶೋಧನೆ ವಿಶ್ವದ ರಾಷ್ಟ್ರಗಳ ಅಸ್ತಿತ್ವಕ್ಕೆ ಹಾಕಿದ ಬೆದರಿಕೆ ಆಗಿದೆ. ಜಗತ್ತಿನ ಶಾಂತಿಗೆ ಅಪಾಯ ತರಬರಲ್ಲ ನಡೆ ಎಂದು ಕಿಡಿಕಾರಿರುವ ಇಸ್ರೇಲ್-ಅಮೆರಿಕ ದೋಸ್ತಿಗಳು, ಇರಾನ್ ವಿರುದ್ಧ ಸಮರ ಸಾರಿವೆ. ಈ ಯುದ್ಧ ಜಾಗತಿಕವಾಗಿ ನೂರಾರು ಪರಿಣಾಮ ಬೀರುತ್ತಿವೆ.

ಇದೀಗ, ಅಮೆರಿಕ ದಾಳಿ ವಿರುದ್ಧ ಪ್ರತೀಕಾರ ತೀರಿಸಿಕೊಳ್ಳಲು ಮುಂದಾಗಿರುವ ಇರಾನ್ ವಿಶ್ವಕ್ಕೆ ಶಾಕ್ ಕೊಡಲು ಮುಂದಾಗಿದೆ. ಪ್ರಮುಖ ತೈಲ ಹಡಗು ಮಾರ್ಗ ಹೊರ್ಮುಜ್ ಜಲಸಂಧಿ ಮುಚ್ಚಲು ಮುಂದಾಗಿದೆ. ಒಂದು ವೇಳೆ ಹೊರ್ಮುಜ್ ಜಲಸಂಧಿ ಬಂದ್ ಆದ್ರೆ ಭಾರತ ಸೇರಿ ಹಲವು ರಾಷ್ಟ್ರಗಳ ಮೇಲೆ ಭಾರಿ ಪರಿಣಾಮ ಬೀರಲಿದೆ.



