ಕುಡಿತದ ಚಟ ತನ್ನ ಪ್ರಾಣಪಕ್ಷಿಯನ್ನ ಇನ್ನಿಲ್ಲದಂತೆ ಮಾಡುತ್ತವೆ ಅನ್ನುವ ಕಹಿಸತ್ಯವನ್ನ ಅರಿತರೂ, ಈ ಕೆಟ್ಟ ದುಶ್ಚಟವನ್ನು ಬಿಡದ ಮಾನವ ಜೀವಿಗಳು ಅದೇಷ್ಟೋ ಇದ್ದಾರೆ. ಇವರ ಈ ಚಟದಿಂದ ಸಾರ್ವಜನಿಕರು ತೊಂದರೆ ಎದುರಿಸುವಂತಾಗಿದೆ.

ಹೌದು, ಮಂಗಳೂರಿನಲ್ಲಿ ಕುಡಿದ ಅಮಲಿನಲ್ಲಿ ಓರ್ವರು ಚಲಿಸುತ್ತಿರುವ ಬಸ್ಸಿನ ಎದುರು ರಸ್ತೆಯಲ್ಲಿ ಮಲಗಿದ ಘಟನೆ ನಡೆದಿದೆ. ಹಂಪನಕಟ್ಟೆ ಸಿಗ್ನಲ್ ಬಳಿ ಈ ಅವಿವೇಕಿ ಹುಚ್ಚಾಟವನ್ನು ಮೆರೆದಿದ್ದು, ಘಟನೆಯ ದೃಶ್ಯ ಬಸ್ಸಿನ ಕ್ಯಾಮರಾದಲ್ಲಿ ಸೆರೆಯಾಗಿದೆ. ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಆಕ್ರೋಶ ವ್ಯಕ್ತವಾಗಿದೆ.



