ಸರಕಾರಿ ಜಾಗವಾಗಿದ್ದರೂ ಪರಿಶಿಷ್ಟ ಪಂಗಡದ ಮಹಿಳೆಯೋರ್ವರಿಗೆ ಮನೆಗೆ ತೆರಳಲು ರಸ್ತೆ ಮಾಡಿಕೊಡದೆ ಆಡಳಿತ ವ್ಯವಸ್ಥೆ ನಿರ್ಲಕ್ಷ್ಯ ವಹಿಸಿದೆ.

15 ದಿನಗಳಲ್ಲಿ ಸಂಬಂಧಿಸಿದ ಅಧಿಕಾರಿಗಳು ನ್ಯಾಯ ಕೊಡದಿದ್ದರೆ ಅಂಬೇಡ್ಕರ್ ತತ್ವ ರಕ್ಷಣಾ ವೇದಿಕೆ ಕಾರ್ಯಕರ್ತರು ಕಾರ್ಯಾಚರಣೆ ನಡೆಸಿ ರಸ್ತೆ ನಿರ್ಮಾಣ ಮಾಡುತ್ತೇವೆ. ಯಾವುದೇ ಅಹಿತಕರ ಘಟನೆಗಳು ನಡೆದರೆ ಆಡಳಿತ ವ್ಯವಸ್ಥೆಯೇ ಹೊಣೆಯಾಗುತ್ತದೆ ಎಂದು ಅಂಬೇಡ್ಕರ್ ತತ್ವ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಗಿರಿಧರ್ ನಾಯ್ಕ ಎಚ್ಚರಿಸಿದ್ದಾರೆ.

ಇವರು ಪುತ್ತೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ಬಂಟ್ವಾಳ ತಾಲೂಕಿನ ಕಡೇಶಿವಾಲ್ಯ ಗ್ರಾಮದ ನೀರಕಜೆ ಎಂಬಲ್ಲಿ ವಾಸ್ತವ್ಯ ಹೊಂದಿರುವ ಚೆನ್ನಪ್ಪ ಎಂಬವರ ಪತ್ನಿ ಸರ್ವೆ ಬಂಬರ್ 98/2 ಎರಲ್ಲಿ 1.98 ಎಕ್ರೆ ಜಮೀನು ಹೊಂದಿದ್ದಾರೆ. ಇದು 1970-71 ದರ್ಖಾಸ್ತು ಮಂಜೂರಾದ ಜಾಗವಾಗಿದ್ದು, ಇದರಲ್ಲಿ 25 ವರ್ಷಗಳ ಹಿಂದೆ ಮನೆ ಕಟ್ಟಿದ್ದಾರೆ. ಇವರ ಮನೆಗೆ ಬರುವಲ್ಲಿ 0.46 ಎಕ್ರೆ ಸರಕಾರಿ ಜಮೀನು ಇದ್ದು, ಸರಕಾರಿ ಜಾಗವಾಗಿದ್ದರೂ ಮನೆಗೆ ಹೋಗಲು ರಸ್ತೆ ನಿರ್ಮಾಣ ಮಾಡಲು ಅವಕಾಶ ನೀಡದೆ ಅನಧಿಕೃತವಾಗಿ ಸ್ವಾಧೀನ ಮಾಡಲಾಗಿದೆ ಎಂಬಿತ್ಯಾದಿ ವಿಚಾರಗಳನ್ನ ಸಾರ್ವಜನಿಕರಿಗೆ ತಿಳಿಸಿದ್ದಾರೆ. ಹಾಗೂ ಮುಂದಿನ ದಿನಗಳಲ್ಲಿ ಉಗ್ರಪ್ರತಿಭಟನೆ ನಡೆಸುವುದಾಗಿಯೂ ಎಚ್ಚರಿಸಿದ್ದಾರೆ.



