ಮೂಕಪ್ರಾಣಿಗಳ ಜೀವದ ಜೊತೆ ಚೆಲ್ಲಾಟವಾಡುವ ಅದೇಷ್ಟೋ ಕ್ರೂರತ್ವದ ಮನಸ್ಸುಗಳು ನಮ್ಮ ಸಮಾಜದಲ್ಲಿವೆ.

ಅದಕ್ಕೆ ನಿರ್ದಶನವೆಂಬಂತೆ ಕಾರ್ಕಳ ತಾಲೂಕು ಮುಡಾರು ಗ್ರಾಮದ ಅಹಿಂಸಾ ಅನಿಮಲ್ ಕೇರ್ ಟ್ರಸ್ಟ್ನಿಂದ ಮೂರು ಹಸುಗಳನ್ನು ಕಳ್ಳತನಗೈದ ಘಟನೆ ನಡೆದಿತ್ತು. ಇದೀಗ ಆರೋಪಿಗಳಾದ 38ರ ಹರೆಯದ ಸಲೀನನ್ನ ಪೊಲೀಸರು ಬಂಧಿಸಿದ್ದಾರೆ. ಬಳಿಕ ಕೃತ್ಯಕ್ಕೆ ಬಳಸಿದ ಕಾರನ್ನು ವಶಪಡಿಸಿಕೊಳ್ಳಲಾಗಿದೆ. ಈ ಪ್ರಕರಣದಲ್ಲಿ ಇನ್ನೂ ಇಬ್ಬರು ಆರೋಪಿಗಳಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ. ಇನ್ನೊಂದು ಪ್ರಕರಣದಲ್ಲಿ ಗಂಗೊಳ್ಳಿ ಕಡೆಗೆ ತೆರಳುವ ರಸ್ತೆಯಲ್ಲಿ ಸ್ಕೂಟರ್‌ನಲ್ಲಿ ದನದ ಮಾಂಸ ಸಾಗಿಸುತ್ತಿದ್ದ ಆರೋಪಿಯ ಹೆಡೆಮುರಿಯನ್ನು ಪೊಲೀಸರು ಕಟ್ಟಿದ್ದಾರೆ. ಬಂಧಿತ ಆರೋಪಿ 35 ರ ಹರೆಯದ ಅಬ್ದುಲ್ ರಹೀಮ್ ಎಂದು ತಿಳಿದು ಬಂದಿದ್ದು, ಈತನಿಂದ ಸ್ಕೂಟರ್ ಮತ್ತು 25 ಕೆಜಿ ದನದ ಮಾಂಸ ವಶ ಪಪಡಿಸಿಕೊಳ್ಳಲಾಗಿದ್ದು,ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇನ್ನು ಗಂಗೊಳ್ಳಿ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ಇನ್ನೊಂದು ಪ್ರಕರಣದಲ್ಲೂ ಇದೇ ಆರೋಪಿ ಭಾಗಿಯಾಗಿದ್ದು ಈತನ ವಿರುದ್ಧ ಪ್ರತ್ಯೇಕ ಪ್ರಕರಣ ದಾಖಲಾಗಿದೆ.



