ಕೆಎಸ್‌ಆರ್‌ಟಿಸಿಯಲ್ಲಿ ಚಾಲಕರ ಕೊರತೆ ಇದೆ. ಪುತ್ತೂರು, ಮಂಗಳೂರು, ಚಾಮರಾಜನಗರ, ರಾಮನಗರ ವಿಭಾಗಗಳಲ್ಲಿ ಚಾಲಕರ ಕೊರತೆ ಬಹುತೇಕವಿದ್ದು, ಈಗ 2,000 ಚಾಲಕರ ಆದೇಶ ಪತ್ರ ಕೊಟ್ಟಿದ್ದೇವೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಹೇಳಿದ್ದಾರೆ.

ಇವರು ಉಡುಪಿಯಲ್ಲಿ ಮಾತನಾಡಿ, ಮಂಗಳೂರು ವಿಭಾಗಕ್ಕೆ 300 ಚಾಲಕರನ್ನು ಹಾಕಿದ್ದೇವೆ. ಉಡುಪಿಗೂ ಇನ್ನೂರಕ್ಕೂ ಹೆಚ್ಚು ಚಾಲಕರ ವ್ಯವಸ್ಥೆ ಮಾಡಿದ್ದೇವೆ. ಇನ್ನು ಮುಂದೆ ಚಾಲಕರ ಕೊರತೆ ಇರೋದಿಲ್ಲ. ಶಾಲೆಗೆ ಹೋಗುವ ವಿದ್ಯಾರ್ಥಿಗಳಿಗೆ ಯಾವುದೇ ತೊಂದರೆ ಆಗಲ್ಲ ಎಂದು ಭರವಸೆಯನ್ನು ಕೊಟ್ಟಿದ್ದಾರೆ.



