ಜನ ಮನದ ನಾಡಿ ಮಿಡಿತ

Advertisement

ಹೈದರಾಬಾದ್: ಪ್ರಿಯಕರನಿಗಾಗಿ ಹೆತ್ತ ತಾಯಿಯನ್ನೇ ಕೊಂದ ಪಾಪಿ ಮಗಳು!!??

ಈಗಿನ ಕಾಲದಲ್ಲಿ ಮಕ್ಕಳಿಗೆ ತಂದೆ-ತಾಯಿಗಳ ಕಾಳಜಿ, ಕಳಕಳಿಗಳೇ ಅರ್ಥವಾಗಲ್ಲ. ಪ್ರಬುದ್ಧತೆ ಬರುವ ಮುನ್ನವೇ ಪ್ರೀತಿಯ ಬಲೆಯಲ್ಲಿ ಬಿದ್ದಿಬಿಡುತ್ತಿದ್ದಾರೆ. ಪ್ರೀತಿಯ ಹೆಸರಿನಲ್ಲಿ ಹೀನ ಕೃತ್ಯಗಳನ್ನು ಎಸಗುತ್ತಿದ್ದಾರೆ. ಪ್ರೀತಿಯಿಂದ ಸಾಕಿ ಸಲುಹಿದ ತಂದೆ-ತಾಯಿಗಳ ಪ್ರೀತಿ, ಆತಂಕ, ಕಾಳಜಿಯೇ ಮಕ್ಕಳಿಗೆ ಅರ್ಥವಾಗುತ್ತಿಲ್ಲ. ಹೈದರಾಬಾದ್ ನಲ್ಲಿ 16 ವರ್ಷದ ಅಪ್ರಾಪ್ತ ಮಗಳೊಬ್ಬಳು ತನ್ನ ಬಾಯ್ ಫ್ರೆಂಡ್ ಜೊತೆಗಿನ ಸಂಬಂಧಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಕ್ಕಾಗಿ ಹೆತ್ತ ತಾಯಿಯನ್ನೇ ಕೊಂದ ಭೀಕರ ಘಟನೆ ನಡೆದಿದೆ.

ತನ್ನ 19 ವರ್ಷದ ಬಾಯ್ ಫ್ರೆಂಡ್ ಹಾಗೂ ಆತನ ಕಿರಿಯ ಸೋದರನ ಜೊತೆ ಸೇರಿಕೊಂಡು ತಾಯಿಯನ್ನು ಮಗಳು ಮುಗಿಸಿದ್ದಾಳೆ. ಹೈದರಾಬಾದ್‌ನ ಜೆಡಿಮೆಟ್ಲಾ ಪ್ರದೇಶದ ಎನ್‌ಎಲ್‌ಬಿ ನಗರದಲ್ಲಿ ಈ ಅಘಾತಕಾರಿ ಘಟನೆ ನಡೆದಿದೆ. ಹತ್ತನೇ ತರಗತಿಯಲ್ಲಿ ಓದುತ್ತಿದ್ದ ವಿದ್ಯಾರ್ಥಿನಿಗೆ 8 ತಿಂಗಳ ಹಿಂದೆ ಸೋಷಿಯಲ್ ಮೀಡಿಯಾದಲ್ಲಿ 19 ವರ್ಷದ ಯುವಕನ ಪರಿಚಯವಾಗಿದೆ. ಬಳಿಕ ಆತನೊಂದಿಗೆ ಸಂಬಂಧ ಬೆಳೆಸಿಕೊಂಡಿದ್ದಾಳೆ. ಈ ವಿಷಯ ಯುವತಿಯ ತಾಯಿಗೆ ಗೊತ್ತಾಗಿದೆ. ತಾಯಿ, ಅಪ್ರಾಪ್ತ ಮಗಳು ಯುವಕನ ಜೊತೆ ಸಂಬಂಧ ಬೆಳೆಸುವುದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. ಇದು ಮನೆಯಲ್ಲಿ ತಾಯಿ- ಮಗಳ ನಡುವೆ ಜಗಳಕ್ಕೆ ಕಾರಣವಾಗಿದೆ. ಇನ್ನು ಇದೇ ವಿಷಯಕ್ಕೆ ಜೂನ್ 23 ರಂದು ಅಪ್ರಾಪ್ತ ವಿದ್ಯಾರ್ಥಿನಿ ತನ್ನ ತಾಯಿ ಅಂಜಲಿಯನ್ನು ಮುಗಿಸಿದ್ದಾಳೆ. ಈ ವೇಳೆ ಬಾಯ್ ಫ್ರೆಂಡ್ ಹಾಗೂ ಆತನ ಸೋದರ ಕೂಡ ಮನೆಯಲ್ಲಿದ್ದು ಮಹಿಳೆಯ ಕುತ್ತಿಗೆ ಹಿಸುಕಿದ್ದಾರೆ. ಬಳಿಕ ಐರನ್ ರಾಡ್ ನಿಂದ ಹೊಡೆದಿದ್ದಾರೆ. ಜೊತೆಗೆ ಚಾಕುವಿನಿಂದ ಅಂಜಲಿಗೆ ಇರಿದಿದ್ದಾರೆ. ಹೈದರಾಬಾದ್‌ನ ಜೆಡಿಮೆಟ್ಲಾ ಪೊಲೀಸರು ಕೊಲೆ ಕೇಸ್ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಮಗಳಿಗೆ ಬುದ್ಧಿವಾದ ಹೇಳಿದ್ದಕ್ಕೆ ತಾಯಿಯೇ ತನ್ನ ಜೀವ ಕಳೆದುಕೊಂಡಿದ್ದಾಳೆ. ಇದಕ್ಕಿಂತ ದಾರುಣ ಕೃತ್ಯ ಮತ್ತೊಂದಿಲ್ಲ.

Leave a Reply

Your email address will not be published. Required fields are marked *

ಕಾಸರಗೋಡು: ಸಮುದ್ರದಲ್ಲಿ ಕೊಚ್ಚಿಹೋದ ಇಬ್ಬರು ಕಾಲೇಜು ವಿದ್ಯಾರ್ಥಿಗಳು..!

ಕಡಬ: ಅಕ್ರಮವಾಗಿ ಜಾನುವಾರು ಸಾಗಾಟ ಮಾಡುತ್ತಿದ್ದ ಪಿಕಪ್ ಪಲ್ಟಿ..!

ಕಡಬ: ಗೋಳಿತ್ತಡಿ-ಏಣಿತ್ತಡ್ಕ-ಕುದುಲೂರು ಸಂಪರ್ಕಿತ ರಸ್ತೆ; ರಸ್ತೆಯುದ್ದಕ್ಕೂ ಹೊಂಡಮಯ..!

ಬಂಟ್ವಾಳ: ಪಾಣೆಮಂಗಳೂರು ಕಲ್ಲುರ್ಟಿ ದೈವಸ್ಥಾನದ ಮುಂಭಾಗದ ಸರ್ವೀಸ್ ರಸ್ತೆಯಲ್ಲಿ ಹೊಂಡಗುಂಡಿ…!

ಉಡುಪಿ: ಮಾದಕ ದ್ರವ್ಯ ಸಾಗಾಟ- ಮಾರಾಟ ಪ್ರಕರಣ: ಪಿಐಟಿ- ಎನ್‌ಡಿಪಿಎಸ್ ಕಾಯ್ದೆಯಡಿ ಆರೋಪಿಯ ಬಂಧನ…!

ಮಂಗಳೂರು: ಅಕ್ರಮ ಆನೆದಂತಗಳ ಮಾರಾಟ; ಆರೋಪಿಗಳ ಬಂಧನ..!

ಬೆಂಗಳೂರು: ಕಾರ್ಕಳದಲ್ಲಿ ತುಳು ಭವನ ನಿರ್ಮಾಣಕ್ಕೆ ಅನುದಾನ ಬಿಡುಗಡೆಗೊಳಿಸುವಂತೆ ಮನವಿ..!

ಬೆಂಗಳೂರು: ಭೀಕರ ರಸ್ತೆ ಅಪಘಾತದಲ್ಲಿ ಕೇರಳ ಮೂಲದ ಇಬ್ಬರು ನರ್ಸಿಂಗ್ ವಿದ್ಯಾರ್ಥಿಗಳು ಮೃತ್ಯು…!

ಉಡುಪಿ: ಕೊಲ್ಲೂರು ಮೂಕಾಂಬಿಕಾ ದೇವಸ್ಥಾನಕ್ಕೆ ತಮಿಳುನಾಡು ಮುಖ್ಯಮಂತ್ರಿ ವಿಜಯ್ ಭೇಟಿ…!

error: Content is protected !!