ಲೀಡ್ಸ್ ಟೆಸ್ಟ್ ಪಂದ್ಯದ ಮೊದಲ ದಿನದಿಂದ ಟೀಮ್ ಇಂಡಿಯಾ ಗೆದ್ದು ಬೀಗಿತ್ತು, ಆದ್ರೆ ಅಂತ್ಯದಲ್ಲಿ ಸೋತು ಸುಣ್ಣವಾಗಿದೆ. ಇನ್ನು ಇಂಗ್ಲೆಂಡ್ ದಾಖಲೆಯ ಜಯ ಸಾಧಿಸಿದೆ. ಗೆಲ್ಲೋ ಹಂತದಲ್ಲಿದ್ದ ಟೀಮ್ ಇಂಡಿಯಾ ಸೋಲಿನ ಪ್ರಪಾತಕ್ಕೆ ಬಿದ್ದಿದ್ದು ಹೇಗೆ? ಶುಭ್ಮನ್ ಗಿಲ್ ಪಡೆ ಎಡವಿದ್ದೆಲ್ಲಿ? ಇಂಗ್ಲೆಂಡ್ ಪ್ರವಾಸದ ಮೊದಲ ಟೆಸ್ಟ್ನಲ್ಲೇ ಟೀಮ್ ಇಂಡಿಯಾ ಫೇಲ್ ಆಗಿದೆ. ಪಂದ್ಯದ ಮೊದಲ ದಿನದಿಂದಲೂ ಡಾಮಿನೇಟಿಂಗ್ ಪರ್ಫಾಮೆನ್ಸ್ ನೀಡಿದ್ದ ಟೀಮ್ ಇಂಡಿಯಾನೇ ಗೆಲ್ಲೋದು ಖಚಿತ ಅನಿಸಿತ್ತು. ಆದ್ರೆ, 5ನೇ ದಿನದಾಟದ ಅಂತ್ಯಕ್ಕೆ ಸೋಲಿಗೆ ಶರಣಾಗಿದೆ. ಇದಕ್ಕೆ ಹಲವು ಕಾರಣಗಳಿವೆ

ಮೊದಲ ಇನ್ನಿಂಗ್ಸ್ನಲ್ಲಿ ಬರೋಬ್ಬರಿ 6 ಕ್ಯಾಚ್, ಸೆಕೆಂಡ್ ಇನ್ನಿಂಗ್ಸ್ನಲ್ಲಿ ಒಂದು ಕ್ಯಾಚ್.. ಒಟ್ಟು 7 ಕ್ಯಾಚ್ ಡ್ರಾಪ್ ಮಾಡಿದ್ರು. ಇನ್ನು ಹಾಫ್ ಚಾನ್ಸ್ಗಳನ್ನ ಕನ್ವರ್ಟ್ ಮಾಡೋ ಪ್ರಯತ್ನವನ್ನೇ ಮಾಡಲಿಲ್ಲ. ಬಿಟ್ಟ ಎಲ್ಲಾ ಕ್ಯಾಚ್ಗಳು ಕೂಡ ದುಬಾರಿಯಾದ್ವು. ಟೀಮ್ ಇಂಡಿಯಾದ ಟಾಪ್ ಆರ್ಡರ್ ಬ್ಯಾಟರ್ಗಳು ಬೊಂಬಾಟ್ ಪ್ರದರ್ಶನ ನೀಡಿದ್ರೆ, ಲೋವರ್ ಆರ್ಡರ್ ಬ್ಯಾಟರ್ಗಳು ಅಟ್ಟರ್ಫ್ಲಾಪ್ ಶೋ ನೀಡಿದ್ರು. ಮೊದಲ ಇನ್ನಿಂಗ್ಸ್ನಲ್ಲಿ 3 ವಿಕೆಟ್ ನಷ್ಟಕ್ಕೆ 430 ರನ್ಗಳಿಸಿದ್ದ ಟೀಮ್ ಇಂಡಿಯಾ ನಂತರ 41 ರನ್ ಅಂತರದಲ್ಲಿ 7 ವಿಕೆಟ್ ಕಳೆದುಕೊಳ್ತು. 2ನೇ ಇನ್ನಿಂಗ್ಸ್ನಲ್ಲಿ 4 ವಿಕೆಟ್ ನಷ್ಟಕ್ಕೆ 333 ರನ್ಗಳಿಸಿದ್ದ ಟೀಮ್ ಇಂಡಿಯಾ ನಂತರ 31 ರನ್ಗಳಿಸುಷ್ಟರಲ್ಲಿ ಆಲೌಟ್ ಆಯ್ತು. ಲೋವರ್ ಆರ್ಡರ್ನ ವೈಫಲ್ಯ ಸೋಲಿಗೆ ಇದು ಮತ್ತೊಂದು ಪ್ರಮುಖ ಕಾರಣ ಅಂತಾನೇ ಹೇಳಬಹುದು.

ಇನ್ನು ಬೌಲಿಂಗ್ ಯುನಿಟ್ನಿಂದ ವೇಗಿ ಜಸ್ಪ್ರಿತ್ ಬೂಮ್ರಾಗೆ ಸರಿಯಾಗಿ ಸಾಥ್ ಸಿಗಲೇ ಇಲ್ಲ. ಒಂದು ಎಂಡ್ನಿಂದ ಬೂಮ್ರಾ ಆಂಗ್ಲರ ಬ್ಯಾಟ್ಸ್ಮನ್ಗಳ ಮೇಲೆ ಒತ್ತಡ ಹೇರ್ತಾ ಇದ್ರು. ಇನ್ನೊಂದು ಎಂಡ್ನ ಬೌಲರ್ಗಳು ಆ ಪ್ರೆಶರ್ನ ರಿಲೀಸ್ ಮಾಡೋ ತರ ಬೌಲಿಂಗ್ ಮಾಡಿದ್ರು. ಅಪಾರ ನಿರೀಕ್ಷೆ ಇಟ್ಟುಕೊಂಡಿದ್ದ ಮೊಹಮ್ಮದ್ ಸಿರಾಜ್ ಅಂತೂ ಅಟ್ಟರ್ ಫ್ಲಾಪ್ ಆದ್ರು. ಇದು ಟೀಮ್ ಇಂಡಿಯಾಗೆ ದೊಡ್ಡ ಮೈನಸ್ ಆಯ್ತು. ಮೊದಲ ಟೆಸ್ಟ್ನಲ್ಲಿ ಬ್ಯಾಟಿಂಗ್ನಲ್ಲಿ ಸಿಕ್ಕ ಸಕ್ಸಸ್ ನಾಯಕನಾಗಿ ಗಿಲ್ಗೆ ಸಿಗಲಿಲ್ಲ. ನಾಯಕನಾಗಿ ಎರಡೂ ಇನ್ನಿಂಗ್ಸ್ಗಳಲ್ಲಿ ಶುಭ್ಮನ್ ಗಿಲ್ ಇಂಪ್ರೆಸ್ಸಿವ್ ಅನಿಸಲೇ ಇಲ್ಲ. ಬೌಲಿಂಗ್ ರೋಟೆಷನ್, ಫೀಲ್ಡ್ ಪ್ಲೇಸ್ಮೆಂಟ್ ವಿಚಾರದಲ್ಲಿ ತೀವ್ರ ನಿರಾಸೆ ಮೂಡಿಸಿದ್ರು. ಅನುಭವದ ಕೊರತೆ ಎದ್ದು ಕಾಣ್ತಿತ್ತು. ಆಂಗ್ಲರಿಗೆ ಇದು ವರವಾದ್ರೆ ಟೀಮ್ ಇಂಡಿಯಾಗೆ ಇದೇ ಶಾಪವಾಯ್ತು.

ಇಂಗ್ಲೆಂಡ್ ತಂಡಕ್ಕೆ ಟೀಮ್ ಇಂಡಿಯಾ 371 ರನ್ಗಳ ಬಿಗ್ ಟಾರ್ಗೆಟ್ನೀಡಿತ್ತು. ಈ ಸವಾಲಿನ ಟಾರ್ಗೆಟ್ ಅನ್ನ ಆಂಗ್ಲರು ಸುಲಭಕ್ಕೆ ಚೇಸ್ ಮಾಡಿದ್ರು. ಇಂಗ್ಲೆಂಡ್ ಅಟ್ಯಾಕಿಂಗ್ ಆಟಕ್ಕೆ ಟೀಮ್ ಇಂಡಿಯಾ ಸುಸ್ತು ಹೊಡೆದು ಬಿಡ್ತು. ಕೌಂಟರ್ ಅಟ್ಯಾಕ್ ನಡೆಸೋಕೆ ಪ್ಲಾನೇ ಇರಲಿಲ್ಲ. ಇಂಗ್ಲೆಂಡ್ ಅಗ್ರೆಸ್ಸಿವ್ ಆಟವಾಡುತ್ತೆ ಅನ್ನೋದು ಗೊತ್ತಿದ್ರೂ, ಪ್ಲ್ಯಾನ್ ಬಿ ಇಲ್ಲದೇ ಕಣಕ್ಕಿಳಿದಿದ್ದು ಸೋಲಿಗೆ ಗುರಿ ಮಾಡಿತು.



