ಪುತ್ತೂರು: ಮಲ್ನಾಡ್ ಇನ್ಫೋಟೆಕ್ ಸ್ಟೇಟ್ ಕೋ ಆರ್ಡಿನೇಟರ್, ಮಾಜಿ ಪಿಸಿಎನ್ ಕೇಬಲ್ ನೆಟ್ವರ್ಕ್ ಪಾಟ್ನರ್, ಕುಂಬ್ರದ ಕಾವು ನಿವಾಸಿ ಸತೀಶ್ ಕುಮಾರ್ (56.ವ) ಜೂ.25ರ ಮಧ್ಯಾಹ್ನ ಹೃದಯಘಾತದಿಂದಾಗಿ ಬೆಂಗಳೂರಿನಲ್ಲಿ ನಿಧನರಾದರು.

ಮೃತರು ತಾಯಿ, ಮಕ್ಕಳಾದ ಅನಿರುದ್ಧ, ಅನುರಾಗ್ ಮತ್ತು ಅಣ್ಣ ಬೆಂಗಳೂರಿನ ಹೊಟೇಲ್ ಉದ್ಯಮಿ ಹರೀಶ್, ತಮ್ಮ ರಿಪಬ್ಲಿಕ್ ಟಿ.ವಿ ಚಾನಲ್ ನಲ್ಲಿ ಕಾರ್ಯನಿರ್ವಹಿಸುತ್ತಿರುವ ರಾಜೇಶ್ ಹಾಗೂ ಬಂಧು ಬಳಗವನ್ನು ಅಗಲಿದ್ದಾರೆ.



