ಭಾರೀ ಮಳೆಯಿಂದ ಹರಿಯುವ ನದಿಯಲ್ಲಿ ಸಿಲುಕಿಕೊಂಡಿದ್ದ 9 ಜನರನ್ನು ಪೊಲೀಸರು ಹಾಗೂ ಎಸ್‌ಡಿಆರ್‌ಎಫ್ ತಂಡ ಜಂಟಿ ಕಾರ್ಯಾಚರಣೆ ನಡೆಸಿ ರಕ್ಷಣೆ ಮಾಡಿದ್ದಾರೆ.

ಜಮ್ಮುಕಾಶ್ಮೀರದಲ್ಲಿ ಭಾರೀ ಮಳೆಯಿಂದ ತವಿ ನದಿಯ ನೀರಿನ ಮಟ್ಟ ಏಕಾಏಕಿ ಏರಿಕೆ ಆಗಿದೆ. ಈ ವೇಳೆ ನದಿಗೆ ಇಳಿದಿದ್ದ 9 ಜನರು ನೀರಿನಲ್ಲಿ ಸಿಲುಕಿಕೊಂಡಿದ್ದರು. ಇದರಿಂದ ಜಂಟಿ ಕಾರ್ಯಾಚರಣೆ ನಡೆಸಿದ ಪೊಲೀಸರು ಹಾಗೂ ಎಸ್‌ಡಿಆರ್‌ಎಫ್ ತಂಡ ಸೇತುವೆ ಮೇಲಿನಿಂದ ಹಗ್ಗ ಬಿಟ್ಟಿದ್ದಾರೆ. ಈ ಹಗ್ಗಗಳನ್ನು ಹಿಡಿದುಕೊಂಡು ಒಬ್ಬೊಬ್ಬರೇ ಮೇಲಕ್ಕೆ ಬಂದಿದ್ದಾರೆ.

ಮದನ್ ಲಾಲ್ ಎನ್ನುವವರು ತವಿ ನದಿಯಲ್ಲಿ ಮರಳು ತೆಗೆಯಲು ಹೋಗಿದ್ದರು. ಈ ಸಮಯದಲ್ಲಿ ಏಕಾಏಕಿ ನೀರಿನ ಮಟ್ಟ ಹೆಚ್ಚಳವಾಗಿದ್ದರಿಂದ ಸುಮಾರು ಎರಡು ಗಂಟೆಗಳ ಕಾಲ ಅಲ್ಲಿಯೇ ಸಿಲುಕಿದ್ದರು. ಬಳಿಕ ಮದನ್ ಲಾಲ್ ಅವರನ್ನು ಎಸ್‌ಡಿಆರ್‌ಎಫ್ ಟೀಮ್ ಸಿಬ್ಬಂದಿ ಸೇತುವೆ ಮೇಲಿನಿಂದ ನದಿಗೆ ಏಣಿಯನ್ನು ಇಳಿಸಿ ಮೇಲೆತ್ತಿ ರಕ್ಷಣೆ ಮಾಡಿದ್ದಾರೆ. ಇನ್ನು ಪಿಂಡದಾನಕ್ಕೆ0ದು ನದಿಗೆ ಹೋಗಿದ್ದ ವ್ಯಕ್ತಿ ಒಬ್ಬರನ್ನು ಸೇರಿದಂತೆ ಇನ್ನು 7 ಜನರನ್ನು ರಕ್ಷಣೆ ಮಾಡಲಾಗಿದೆ. ಅಪಾಯಕ್ಕೆ ಸಿಲುಕಿದ್ದ ಕುದುರೆಗಳನ್ನು ಸಹ ಸುರಕ್ಷಿತ ಸ್ಥಳಕ್ಕೆ ರವಾನೆ ಮಾಡಲಾಗಿದೆ.



