ಕಂಠ ಪೂರ್ತಿ ಕುಡಿದ ಮಹಿಳೆಯೊಬ್ಬಳು, ರೈಲ್ವೇ ಹಳಿ ಮೇಲೆ ಕಾರು ಓಡಿಸಿರುವ ಘಟನೆ ಹೈದರಾಬಾದ್‌ನ ಶಂಕರಪಲ್ಲಿಯ ಟ್ರ‍್ಯಾಕ್‌ನಲ್ಲಿ ನಡೆದಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಇದೀಗ ಸಖತ್ ವೈರಲ್ ಆಗ್ತಾ ಇದೆ.

ಟ್ರ‍್ಯಾಕ್ ಮೇಲೆ ಕಿಯಾ ಕಾರ್ ಡ್ರೈವ್ ಮಾಡಿಕೊಂಡು ಹೊರಟ ಮಹಿಳೆಯ ಹುಚ್ಚಾಟಕ್ಕೆ ಜನ ದಂಗಾಗಿದ್ದಾರೆ. ಹೀಗೆ ರೈಲ್ವೆ ಟ್ರ‍್ಯಾಕ್ ಮೇಲೆ ಕಾರ್ ಡ್ರೈವ್ ಮಾಡಿಕೊಂಡು ಹೊರಟ ಮಹಿಳೆಯನ್ನು ಲಕ್ನೋದ ವೋಮಿಕಾ ಸೋನಿ ಎಂದು ಗುರುತಿಸಲಾಗಿದೆ. ರೈಲ್ವೆ ಟ್ರ‍್ಯಾಕ್ ಮೇಲೆ ಕಾರ್ ಚಲಾಯಿಸಿದ್ದರಿಂದ ರೈಲುಗಳ ಸಂಚಾರದಲ್ಲಿ ವ್ಯತ್ಯಯವಾಗಿದೆ. ಕೊಂಡಗಲ್ ಗೇಟ್ ಬಳಿ ಕಾರನ್ನು ತಡೆಯಲು ರೈಲ್ವೇ ಸಿಬ್ಬಂದಿ ಯತ್ನಿಸಿದ್ದಾರೆ. ಕಾರು ನಿಲ್ಲಿಸದೆ ವೋಮಿಕಾ ಸೋನಿ ಕಾರ ಡ್ರೈವ್ ಮಾಡಿಕೊಂಡು ಎಸ್ಕೆಪ್ ಆಗುವ ಯತ್ನ ಮಾಡಿದ್ದಾಳೆ. ಬಳಿಕ ಸ್ಥಳೀಯರು, ರೈಲ್ವೆ ಸಿಬ್ಬಂದಿ ಸೇರಿಕೊಂಡು ಕಾರ್ ನಿಲ್ಲಿಸಿ ಮಹಿಳೆಯನ್ನು ವಶಕ್ಕೆ ಪಡೆದಿದ್ದಾರೆ. ಮಹಿಳೆಯ ಬಳಿಯಿಂದ ಪಾನ್ ಕಾರ್ಡ್, ಕಾರ್ ಡ್ರೈವಿಂಗ್ ಲೈಸೆನ್ಸ್ ಅನ್ನು ವಶಪಡಿಸಿಕೊಳ್ಳಲಾಗಿದೆ.



