ತೆಲುಗು ಮಾಧ್ಯಮಗಳಲ್ಲಿ ನ್ಯೂಸ್ ಅಂಕರ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಸ್ವೇಚ್ಚ ವೋಟಾರ್ಕರ್ ಅವರು ಅನುಮಾನಸ್ಪಾದ ರೀತಿಯಲ್ಲಿ ಜೀವ ಬಿಟ್ಟಿದ್ದಾರೆ ಎಂದು ಹೇಳಲಾಗಿದೆ.

ಚಿಕ್ಕಡಪಲ್ಲಿಯ ಆರ್‌ಟಿ ಕ್ರಾಸ್ ರಸ್ತೆಯ ಜವಹರ್‌ನಗರದಲ್ಲಿನ ನಿವಾಸದಲ್ಲಿ ಈ ಘಟನೆ ನಡೆದಿದೆ. ನ್ಯೂಸ್ ಆಂಕರ್ ಸ್ವೇಚ್ಚ ವೋಟಾರ್ಕರ್ ಅವರು ಕಳೆದ 18 ವರ್ಷಗಳಿಂದ ತೆಲುಗು ಮಾಧ್ಯಮಗಳಲ್ಲಿ ಕೆಲಸ ಮಾಡುತ್ತಿದ್ದರು. ಪ್ರಸ್ತುತ ಅವರು ಟಿ ನ್ಯೂಸ್‌ನಲ್ಲಿ ಕೆಲಸ ಮಾಡುತ್ತಿದ್ದರು. ಅವರ ಮನೆಯಲ್ಲಿನ ಫ್ಯಾನ್‌ಗೆ ಆಂಕರ್ ಸ್ವೇಚ್ಚ ನೇಣು ಬಿಗಿದುಕೊಂಡಿರುವ ಸ್ಥಿತಿಯಲ್ಲಿ ಕಂಡು ಬಂದಿದ್ದಾರೆ. ಮಾಹಿತಿ ತಿಳಿದ ತಕ್ಷಣ ಪೊಲೀಸರು ಘಟನಾ ಸ್ಥಳಕ್ಕೆ ತೆರಳಿದ್ದಾರೆ. ಬಳಿಕ ಅವರ ಮೃತದೇಹವನ್ನು ನಗರದ ಗಾಂಧಿ ಆಸ್ಪತ್ರೆಗೆ ರವಾನೆ ಮಾಡಲಾಗಿದೆ ಎಂದು ಹೇಳಲಾಗಿದೆ. ಆಂಕರ್ ನಿಧನ ಹೊಂದಿದ ಸುದ್ದಿ ತಿಳಿಯುತ್ತಿದ್ದಂತೆ ಸಂಬAಧಿಕರು, ಸ್ನೇಹಿತರು ಆಸ್ಪತ್ರೆಗೆ ದೌಡಾಯಿಸಿದ್ದಾರೆ. ಆದರೆ ಆಂಕರ್ ಜೀವ ಕಳೆದುಕೊಂಡಿರುವುದಕ್ಕೆ ನಿಖರವಾದ ಮಾಹಿತಿ ತಿಳಿದು ಬರಬೇಕಿದೆ. ಇವರು ಜೀವ ಕಳೆದುಕೊಳ್ಳುವುದಕ್ಕೂ ಮೊದಲು ಇನ್‌ಸ್ಟಾದಲ್ಲಿ ಕೆಲ ಪೋಟೋಗಳನ್ನು ಶೇರ್ ಮಾಡಿದ್ದಾರೆ. ಈ ಪೋಸ್ಟ್ಗೆ ಟ್ಯಾಗ್‌ಲೈನ್ ಕೂಡ ಬರೆದಿದ್ದಾರೆ. ಮನಸು ಪ್ರಶಾಂತವಾಗಿ ಇದ್ರೆ ಆತ್ಮ ಮಾತನಾಡುತ್ತದೆ. ಬುದ್ಧ ಎಂದು ಬರೆದಿದ್ದಾರೆ.



