ಇನ್ನು ಆರು ದಿನಗಳಲ್ಲಿ ಜಪಾನಿನಲ್ಲಿ ಭಾರೀ ಸುನಾಮಿ ಸಂಭವಿಸುತ್ತದೆ ಎಂಬ ಭಯ, ಜಪಾನಿಗೆ ಪ್ರವಾಸಕ್ಕೆ ತೆರಳುವವರು ತಮ್ಮ ಪ್ರವಾಸ ರದ್ದು ಮಾಡುವಂತಹ ಸ್ಥಿತಿ ತಂದಿದೆ.

ಜುಲೈ 5 ರಂದು ಸುನಾಮಿ ಜಪಾನಿಗೆ ಅಪ್ಪಳಿಸುತ್ತದೆಂದು ಬಲ್ಗೇರಿಯನ್ ಭವಿಷ್ಯ ತಜ್ಞರಾದ ಬಾಬಾ ವಂಗ ಹೇಳಿದ್ದಾರೆ ಎನ್ನಲಾದ ಭವಿಷ್ಯ ಈ ಆತಂಕಕ್ಕೆ ಕಾರಣವಾಗಿದೆ. ಇದರಿಂದ ಅಲ್ಲಿಯ ಪ್ರವಾಸೋದ್ಯಮ ಕುಸಿದಿದೆ. ಜಪಾನಿನ ಸಮುದ್ರದಲ್ಲಿ ಭೂಕಂಪ ಸಂಭವಿಸುತ್ತದೆ, ಜ್ವಾಲಾಮುಖಿ ಭುಗಿಲೆದ್ದು ಲಾವಾರಸ ಕಾರುತ್ತದೆ, ಸುನಾಮಿ ಅಪ್ಪಳಿಸುತ್ತದೆ ಎಂಬೆಲ್ಲ ವದಂತಿಗಳು ಹರಿದಾಡತೊಡಗಿವೆ. 2011ರಲ್ಲಿ ಸಂಭವಿಸಿದ ಭೂಕಂಪಕ್ಕಿಂತ ಪ್ರಬಲ ಭೂಕಂಪ ಈ ವರ್ಷ ಸಂಭವಿಸಲಿದ್ದು, ಜಪಾನ್ ಮತ್ತು ಫಿಲಿಪೈನ್ಸ್ ನಡುವೆ ಸಾಗರದಲ್ಲಿ ದೊಡ್ಡ ಬಿರುಕು ಉಂಟಾಗಲಿದೆಯಂತೆ. ಬಲ್ಗೇರಿಯಾ ಮೂಲದ ಭವಿಷ್ಯಕಾರ್ತಿಯಾದ ಬಾಬಾ ವಂಗಾ ಅವರು 1911 ರಿಂದ 1996ರವರೆಗೆ ಬದುಕಿದ್ರು. ತಮ್ಮ ಜೀವಿತಾವಧಿಯಲ್ಲಿ ಅವರು ನುಡಿದ ಅನೇಕ ಭವಿಷ್ಯಗಳು ನಿಜವಾಗಿವೆ. ಕೊಲ್ಲಿ ಯುದ್ದದ ಬಗ್ಗೆ ಅವರು ಮೊದಲೇ ಭವಿಷ್ಯ ನುಡಿದಿದ್ದಾರೆ. ಕೊರೊನಾ ಜಾಗತಿಕ ಸಾಂಕ್ರಾಮಿಕ ರೋಗದ ಬಗ್ಗೆಯೂ ಅವರ ಭವಿಷ್ಯವಾಣಿಯಲ್ಲಿ ಸೂಚನೆಗಳಿದ್ದವು ಎನ್ನಲಾಗುತ್ತಿದೆ.



