ಉಸಿರಾಟದ ತೊಂದರೆ ಉಂಟಾಗಿ ಹಲವರು ಅಸ್ವಸ್ತಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ಕಡಬ ತಾಲೂಕಿನ ಕಾಣಿಯೂರಿನ ಕೂರತ್ ತಂಙಳ್ ಉರೂಸ್ ಕಾರ್ಯಕ್ರಮದಲ್ಲಿ ನಡೆದಿದೆ.

ನಿರೀಕ್ಷೆಗೂ ಮೀರಿ ಬಂದ ಭಕ್ತರ ಕಾರಣಕ್ಕಾಗಿ ಆಮ್ಲಜನಕದ ಕೊರತೆಯುಂಟಾಗಿ, ಉಸಿರಾಟ ಸಮಸ್ಯೆ ಕಂಡುಬಂದಿದೆ. ಅಸ್ವಸ್ಥರಿಗೆ ಕಾಣಿಯೂರು ಮತ್ತು ಪುತ್ತೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಭಾರೀ ಜನಸ್ತೋಮದಿಂದಾಗಿ ರಸ್ತೆ ಸಂಪೂರ್ಣ ಬಂದ್ ಆಗಿತ್ತು ಎನ್ನಲಾಗಿದೆ.



