ಯುವತಿಯೊಬ್ಬಳಿಗೆ ಚೂರಿಯಿಂದ ಇರಿದು ಬಳಿಕ ವ್ಯಕ್ತಿಯೋರ್ವ ಆಕೆಯ ಮನೆಯೊಳಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಮಾರಿಪಳ್ಳ ಸಮೀಪದ ಸುಜೀರು ಎಂಬಲ್ಲಿ ನಡೆದಿದೆ.

ಕೊಡ್ಮಾಣ್ ನಿವಾಸಿ ಸುದೀರ್ (30) ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿಯಾಗಿದ್ದಾನೆ. ಸುಜೀರು ಬಾಡಿಗೆ ಮನೆಯೊಂದರಲ್ಲಿ ಇರುವ ಯುವತಿಗೆ ಚೂರಿಯಿಂದ ಇರಿದು ಗಾಯಗೊಳಿಸಿದ ಸುದೀರ್, ಬಳಿಕ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಚೂರಿ ಇರಿತಕ್ಕೊಳಗಾದ ಯುವತಿ ಮೂರ್ಚೆ ತಪ್ಪಿ ಬಿದ್ದಿದ್ದಳು, ಈಕೆಯ ಮನೆಯವರು ಸಮೀಪದ ಖಾಸಗಿ ಆಸ್ಪತ್ರೆಗೆ ದಾಖಲಿಸಲು ಹೋದ ವೇಳೆ, ಯುವತಿಯ ಮನೆಯಲ್ಲಿ ಯಾರು ಇರಲಿಲ್ಲವಾದರಿಂದ ಆರೋಪಿ ಸುದೀರ್ ಮನೆಯೊಳಗೆ ಹೋಗಿ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೋಲೀಸ್ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ. ಬಂಟ್ವಾಳ ಗ್ರಾಮಾಂತರ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



