ತುಳುನಾಡಿನ ಇತಿಹಾಸದ ಭವ್ಯತೆಯನ್ನು ಸಾರುವ ದೇವಾಲಯಗಳು, ಕೋಟೆಗಳನ್ನ ಕೆಲ ಪ್ರದೇಶಗಳಲ್ಲಿ ಇನ್ನು ನೋಡಬಹುದಾಗಿದೆ.

ಕುಂಬಳೆ ಅರಸರ ಕೇಂದ್ರವಾಗಿದ್ದ ಕಣ್ವಪುರ ಸನಿಹದಲ್ಲೇ ಕೆಳದಿ ನಾಯಕರ ಕುಂಬ್ಳೆ ಕೋಟೆ ಇಂದಿಗೂ ಇದೆ. ಈ ಕೋಟೆಯನ್ನು 1608 ರ ಸುಮಾರಿಗೆ ಇಕ್ಕೇರಿ ದೊರೆ ಹಿರಿಯ ವೆಂಕಟಪ್ಪ ನಾಯಕ ನಿರ್ಮಿಸಿದ್ದಾರೆ ಎಂದು ಇತಿಹಾಸ ಹೇಳತ್ತೆ. ಇತಿಹಾಸದಲ್ಲಿ ಬಾಳಿದ ಕೋಟೆ ಇಂದು ವಿನಾಶದ ಅಂಚಿಕೆ ಹೋಗ್ತಾ ಇದೆ. ಮಳೆಗಾಲದ ಸಮಯದಲ್ಲಿ ಕೋಟೆಯ ಕಲ್ಲುಗಳು ಅದರ ಸುತ್ತ ಮುತ್ತ ಹಸಿರಿನ ಭವ್ಯತೆಯಲ್ಲಿ ಮರೆಯಾಗುವ ಜೊತೆಯಲ್ಲಿ ಇತಿಹಾಸದಿಂದಲೂ ಮರೆಯಾಗುವ ಭೀತಿಯಲ್ಲಿ ಇದೆ. ಸರಿಯಾದ ನಿರ್ವಹಣೆ ಇಲ್ಲದೆ ಇತಿಹಾಸ ಕೋಟೆ ಅಸಹಾಯಕವಾಗಿ ನಿಂತಿದೆ.

ಸುತ್ತಲು ಹರಡಿದ ಹಸಿರ ಕಾಡು ಪೊದೆ ಕಣ್ಣಿಗೆ ಸುಂದರಾವಾಗಿ ಕಂಡರೂ ಅದು ಕೋಟೆಯ ಸುತ್ತುವರೆದಾಗ ಇತಿಹಾಸದ ಪತನವೇ ಸರಿ. ಪ್ರಮುಖ ಯಾತ್ರಾ ಸ್ಥಳವನ್ನಾಗಿ ಮಾರ್ಪಾಡು ಮಾಡಬಹುದಾದ ಸ್ಥಳ, ಸನಿಹವೇ ಇರುವ ರಾಷ್ಟ್ರೀಯ ಹೆದ್ದಾರಿ, ದೇವಾಲಯಗಳು ಈ ಕೋಟೆಯನ್ನು ದೊಡ್ಡ ಪ್ರವಾಸಿ ಕೇಂದ್ರವನ್ನಾಗಿ ಮಾಡಬಹುದು. ಆದರೆ ಈ ಬಗ್ಗೆ ಸರಕಾರ ಮುತುವರ್ಜಿ ವಹಿಸದೆ ಅದು ಹಾಗೆ ಉಳಿದಿರುವುದು ಬೇಸರದ ಸಂಗತಿ. ಕುಂಬ್ಳೆ ಕೋಟೆ ಇತ್ತೀಚಿಗೆ ಅವ್ಯಹಾರಗಳ ತಾಣವಾಗಿದೆ. ಈ ತಾಣ ಧೂಮಪಾನ ಮಧ್ಯಪಾನ ವ್ಯಸನಿಗಳ ಮಿನಿ ಬಾರ್ ಆಗಿ ಕೂಡ ಮಾರ್ಪಟ್ಟಿರುವುದು ದುರಂತ. ಸ್ಥಳೀಯ ಅಧಿಕಾರಿಗಳು, ಕೇರಳ ಪುರಾತತ್ವ ಇಲಾಖೆ ಈ ಬಗ್ಗೆ ಗಮನ ಹರಿಸಿ ಪರಿಹಾರ ಕ್ರಮ ಕೈಗೊಳ್ಳಬೇಕು. ಕಾಸರಗೋಡು ಜಿಲ್ಲೆಯಲ್ಲಿ ಬೇಕಲ ಕೋಟೆ ಒಂದು ಬಿಟ್ಟು ಮತ್ತೆಲ್ಲಾ ಕೋಟೆಯ ವ್ಯಥೆ ಇದುವೇ ಆಗಿದೆ.



