ರಾಜ್ಯ ಸರಕಾರ ಹಿಂದೂ ವಿರೋಧಿ ಧೋರಣೆಯ ಮೂಲಕ ಹಿಂದೂ ಸಂಘಟನೆಗಳ ಸಾಮಾಜಿಕ ಕಾರ್ಯಕರ್ತರ ಮೇಲೆ ಕಾನೂನು ವಿರೋಧಿ ಕ್ರಮಗಳನ್ನು ನಡೆಸುತ್ತಿದೆ ಎಂದು ರಾಜ್ಯ ಸರಕಾರದ ನಿಲುವನ್ನು ಖಂಡಿಸಿ ಹಿಂದು ಜಾಗರಣ ವೇದಿಕೆ ನೇತೃತ್ವದಲ್ಲಿ ಪರಿವಾರ ಸಂಘಟನೆಗಳ ಸಹಭಾಗಿತ್ವದಲ್ಲಿ ದರ್ಬೆಯಲ್ಲಿ ಪ್ರತಿಭಟನೆ ನಡೆಯಿತು.

ಹಿಂದು ಜಾಗರಣ ವೇದಿಕೆ ಕರ್ನಾಟಕ ಪ್ರಾಂತದ ಕಾರ್ಯಾಕಾರಿಣಿ ಸದಸ್ಯ ಅಜಿತ್ ಕೊಡಗು ಅವರು ಮಾತನಾಡಿ, ರಾಜ್ಯದ ಕಾಂಗ್ರೆಸ್ ಸರಕಾರ ಇವತ್ತು ಹಿಂದು ಕಾರ್ಯಕರ್ತರನ್ನು ಯಾವುದೇ ಕಾರ್ಯಕ್ರಮಕ್ಕೆ ಹೋಗದಂತೆ ಅಡ್ಡಿಪಡಿಸುವ ಕೆಲಸ ಮಾಡುತ್ತಿದೆ. ದ ಕ ಜಿಲ್ಲೆಯಲ್ಲಿ ಕಾಂಗ್ರೆಸ್ ಸರಕಾರ ಇಸ್ಲಾಮಿಕ್ ಒಟ್ ಬ್ಯಾಂಕ್‌ಗಾಗಿ ರಾಜಕಾರಣ ಮಾಡುತ್ತಿದೆ. ಸ್ವಾತಂತ್ರ ಪೂರ್ವದಲ್ಲೂ ಯಾವುದೇ ಕಾರಣಕ್ಕೂ ದೇಶ ಇಸ್ಲಾಮಿಕ್ ಆಗಲಿಲ್ಲ ಕಾರಣ ಇಷ್ಟೆ. ಆಗ ದೇಶ ಭಕ್ತರು ಮತಾಂತರ ಅಗಲಿಲ್ಲ. ಅವತ್ತಿನ ಕಾಲಗಟ್ಟದಲ್ಲಿ ಕೂಡಾ ಸೋಗಲಾಡಿತನ ಇತ್ತು. ಆದರೂ ಈ ಧರ್ಮವನ್ನು ಅಲುಗಾಡಿಸಲು ಆಗಲಿಲ್ಲ. ಇವತ್ತು ಕಾರ್ಯಕರ್ತರ ಹತ್ಯೆಗೆ ಸೂಪಾರಿಯನ್ನು ಸರಕಾರ ನೀಡುತ್ತಿದೆ. ನಾವು ನಮ್ಮ ರಾಷ್ಟ್ರ ಧರ್ಮ ಉಳಿಸಲು ಹೋರಾಟ ಮಾಡುತ್ತಿದ್ದೇವೆ ಎಂದು ಹೇಳಿದ್ದಾರೆ. ಇದೇ ವೇಳೆ ಪುತ್ತೂರು ಜಿಲ್ಲಾ ಸಂಯೋಜಕ ಮೋಹನ್ ದಾಸ್ ಕಾಣಿಯೂರು ಮಾತನಾಡಿದ್ರು.



