ಜನ ಮನದ ನಾಡಿ ಮಿಡಿತ

Advertisement

ಕಂಟೆಂಟ್ ಕ್ರಿಯೇಟರ್ಸ್ಗೆ ಶಾಕ್!!???.. ಇನ್ನು ಮುಂದೆ ಯೂಟ್ಯೂಬ್‌ನಿಂದ ಹಣ ಗಳಿಸೋದು ಸುಲಭದ ಮಾತಲ್ಲ..!

ಕಂಟೆಂಟ್ ಕ್ರಿಯೇಟರ್ಸ್ಗಳಿಗೆ ಯೂಟ್ಯೂಬ್ ಶಾಕ್ ಕೊಟ್ಟಿದೆ. ಜುಲೈ 15ರ ನಂತರ ಯೂಟ್ಯೂಬ್ ಮೂಲಕ ಹಣ ಗಳಿಕೆ ಸ್ವಲ್ಪ ಕಠಿಣವಾಗಲಿದೆ. ಇತ್ತೀಚಿನ ದಿನಗಳಲ್ಲಿ ಯೂಟ್ಯೂಬ್ ಚಾನೆಲ್‌ಗಳ ಸಂಖ್ಯೆ ವಿಪರೀತ ಹೆಚ್ಚಾಗಿದೆ. ಅದರಲ್ಲೂ ಸಾಕಷ್ಟು ಮಂದಿ ಯೂಟ್ಯೂಬ್‌ನಲ್ಲಿ ವಿಡಿಯೋ ಮಾಡಿ ಹಣವನ್ನು ಬಹಳ ಸುಲಭವಾಗಿ ಗಳಿಸುತ್ತಿದ್ದಾರೆ. ಜನರು ಎಐ ಬಳಸಿ, ಸುಲಭವಾಗಿ, ಯಾವುದೇ ಶ್ರಮವಿಲ್ಲದೆ ವಿಡಿಯೋ ಶೇರ್ ಮಾಡಿ ಸಂಪಾದಿಸುತ್ತಿದ್ದಾರೆ.


ಅಷ್ಟೇ ಅಲ್ಲದೇ ಮತ್ತೆ ಕೆಲವರು ಬೇರೆ ಕಡೆಯ ವಿಡಿಯೋಗಳನ್ನು ಬದಲಾವಣೆ ಮಾಡಿ ಹಾಕ್ತಿದ್ದಾರೆ. ಈಗ ಹಾಗೇ ಮಾಡಲು ಆಗೋದಿಲ್ಲ. ತನ್ನ ವಿಡಿಯೋ ಕ್ರಿಯೇಟರ್‌ಗಳಿಗೆ ಹೊಸ ಶಾಕ್ ನೀಡಿದೆ. ಲಾಭ ಗಳಿಸುವ ಮಾದರಿಯಲ್ಲಿ ಹಲವು ನಿಮಯಗಳ ಬದಲಿಸುವ ಮೂಲಕ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಯುಟ್ಯೂಬ್ ಸಂಸ್ಥೆ ಮುಂದಾಗಿದೆ. ತನ್ನ ಮೋನಟೈಸೇಶನ್ ನಿಯಮದಲ್ಲಿ ಮಹತ್ವದ ಬದಲಾವಣೆ ಮಾಡ್ತಿದೆ. ಹೊಸ ನಿಯಮ ಇದೇ ಜುಲೈ 15ರಿಂದ ಜಾರಿಗೆ ಬರಲಿದೆ. ಹಳೆ ವಿಡಿಯೋಗಳನ್ನು ಮತ್ತೆ ಮತ್ತೆ ಅಪ್ಲೋಡ್ ಮಾಡಿ ವೀವ್ಸ್ ಪಡೆಯುತ್ತಿರುವವರಿಗೆ ಕಡಿವಾಣ ಹಾಕಲು ಇದೀಗ ಯೂಟ್ಯೂಬ್ ಮುಂದಾಗಿದೆ. ಜುಲೈ 15, 2025 ರಿಂದ, ಪದೇ ಪದೆ ಒಂದೇ ವಿಡಿಯೋ ಅಪ್ಲೋಡ್ ಮಾಡಿದ್ರೆ, ಅಥವಾ ಬೇರೆಯವರ ವಿಡಿಯೋವನ್ನು ನಕಲಿ ಮಾಡಿ ಪೋಸ್ಟ್ ಮಾಡಿದ್ರೆ ಅಂಥ ಖಾತೆದಾರರಿಗೆ ಯೂಟ್ಯೂಬ್ ಹಣಗಳಿಸಲು ಅವಕಾಶ ನೀಡುವುದಿಲ್ಲ. ಯೂಟ್ಯೂಬ್‌ನಲ್ಲಿ ಅಪ್ಲೋಡ್ ಆಗುವ ವಿಡಿಯೋಗಳ ಗುಣಮಟ್ಟವನ್ನು ಸುಧಾರಿಸುವ ಗುರಿಯಿಂದ ಈ ನಿರ್ಧಾರ ತೆಗೆದುಕೊಂಡಿದೆ ಎನ್ನಲಾಗಿದೆ. ಈ ಮೂಲಕ ಯೂಟ್ಯೂಬ್ ತನ್ನ ನಿಯಮಗಳನ್ನು ತಂದಿದೆ. ಜೊತೆಗೆ ನಿಜವಾದ ಕಂಟೆಂಟ್ ಕ್ರಿಯೇಟರ್ಸ್ ರಕ್ಷಿಸುವುದು ಮತ್ತು ವೇದಿಕೆಯನ್ನು ದುರುಪಯೋಗಪಡಿಸಿಕೊಳ್ಳುವ ಚಾನೆಲ್‌ಗಳ ಸಂಖ್ಯೆಯನ್ನು ಕಡಿಮೆ ಮಾಡುವುದು ಮುಖ್ಯ ಉದ್ದೇಶವಾಗಿದೆ.


ಇನ್ಮುಂದೆ ಬೇರೊಬ್ಬರ ವಿಷಯವನ್ನು ಎತ್ತಿಕೊಂಡು ಅದನ್ನು ಸ್ವಲ್ಪ ಬದಲಾಯಿಸಿ ಪೋಸ್ಟ್ ಮಾಡಲು ಅನುಮತಿ ನೀಡಲಾಗುವುದಿಲ್ಲ. ವೀಡಿಯೊವನ್ನು ಹೊಸದಾಗಿ ತಯಾರಿಸಬೇಕು. ಬೇರೆ ವಿಡಿಯೋವನ್ನು ಕೂಡ ಸಂಪೂರ್ಣ ಬದಲಿಸಿ ಪೋಸ್ಟ್ ಮಾಡ್ಬೇಕು. ಪುನರಾವರ್ತಿತ ವೀಡಿಯೊಗಳನ್ನು ನಿಷೇಧಿಸಲಾಗುವುದು. ಹಣ ಗಳಿಕೆಗೆ ನೀವು ಮಾಡಿದ ವಿಡಿಯೋವನ್ನೇ ಮತ್ತೆ ಮತ್ತೆ ಹಾಕುವಂತಿಲ್ಲ. ರೋಬೋಟ್‌ಗಳ ಧ್ವನಿ ಹೊಂದಿರುವ ವಿಡಿಯೋಕ್ಕೆ ಅವಕಾಶ ಇಲ್ಲ. ಬರೀ ಹಣ ಗಳಿಸುವ ಉದ್ದೇಶದಿಂದ ಮಾಹಿತಿ ಇಲ್ಲದ ಅಥವಾ ಮನರಂಜನೆ ಇಲ್ಲದ ವೀಡಿಯೊಗಳಿಗೆ ಅವಕಾಶ ಇಲ್ಲ. ಬಹಳ ಮುಖ್ಯವಾಗಿ ಯೂಟ್ಯೂಬ್ ತನ್ನ ನಿಯಮದಲ್ಲಿ ಎಲ್ಲೂ ಎಐ ಹೆಸರನ್ನು ಹೇಳಿಲ್ಲ. ಆದ್ರೆ ಎಐ ನಿಂದ ಮಾಡಿದ, ಮಾನವೀಯ ಸ್ಪರ್ಶವಿಲ್ಲದ, ಆಟೋ ಜನರೇಟ್ ಧ್ವನಿಯ ವಿಡಿಯೋವನ್ನು ಸಹ ಈ ಕಟ್ಟುನಿಟ್ಟಿನ ನಿಯಮದಲ್ಲಿ ತರಬಹುದು ಎನ್ನಲಾಗಿದೆ.

ಈ ಹಿಂದೆ ಯೂಟ್ಯೂಬ್‌ನಲ್ಲಿ ಹಣ ಗಳಿಸಲು 12 ತಿಂಗಳುಗಳಲ್ಲಿ 1,000 ಸಬ್‌ಸ್ಕ್ರೈಬರ್ ಮತ್ತು 4,000 ಗಂಟೆ ವೀವ್ಸ್ ಸಮಯ ಪೂರ್ಣಗೊಂಡಿರಬೇಕು. ಕಳೆದ 90 ದಿನಗಳಲ್ಲಿ ಶಾರ್ಟ್ಸ್ ವಿಡಿಯೋಗಳು 10 ಮಿಲಿಯನ್ ವೀವ್ಸ್ ಪಡೆದಿರಬೇಕು. ನೀವು ಇದನ್ನು ಪೂರ್ಣಗೊಳಿಸಿದ್ರೆ ಚಾನಲ್ ಹಣಗಳಿಕೆಗೆ ಒಪ್ಪಿಗೆ ನೀಡ್ತಿತ್ತು. ಈ ಹಿಂದೆ ಕಾಪಿ ಪೇಸ್ಟ್ಗೆ ಅವಕಾಶ ನೀಡಲಾಗಿತ್ತು. ಜೊತೆಗೆ ಎಐ ಬಳಕೆ ಮಾಡಬಹುದಾಗಿತ್ತು. ಜೊತೆಗೆ ಹಳೆ ವಿಡಿಯೋವನ್ನು ಮತ್ತೆ ಪೋಸ್ಟ್ ಮಾಡಬಹುದಿತ್ತು. ಆದರೆ ಈ ಬದಲಾವಣೆ ಸಾವಿರಾರು ಕಂಟೆಂಟ್ ಕ್ರಿಯೇಟರ್‌ಗಳ ಗಳಿಕೆ ಮೇಲೆ ಪರಿಣಾಮ ಬೀರಲಿದೆ ಎಂದು ಹೇಳಲಾಗುತ್ತಿದೆ.

Leave a Reply

Your email address will not be published. Required fields are marked *

ಮಂಗಳೂರು: ಮಂಗಳೂರಿನ ಪತ್ರಿಕಾಭವನದಲ್ಲಿ `ಕೊಡಗಿನ ಕುಲದೇವತೆ ಕಾವೇರಿ’ ಕೃತಿ ಬಿಡುಗಡೆ..!

ಬಂಟ್ವಾಳ: ಜೋರಾದ ಮಳೆಗೆ ಬಂಟ್ವಾಳ ತಾಲೂಕಿನ ಇಡ್ಕಿದು ಗ್ರಾಮದಲ್ಲಿ ಮನೆಯೊಂದಕ್ಕೆ ಹಾನಿ..!

ಉಡುಪಿ: ಸಬ್ಸಿಡಿ ಲೋನ್ ಮಾಡಿಸಿಕೊಡುವುದಾಗಿ ನಂಬಿಸಿ ಮೋಸ ಮಾಡಿದ ಮಹಿಳೆ..!

ದುಬೈ: ಅಕ್ಟೋಬರ್ 25 ರಂದು ದುಬೈನಲ್ಲಿ ದುಬೈ ಗಡಿನಾಡ ಉತ್ಸವ

ಮಂಗಳೂರು: ಅಶೋಕ ಜನಮನ ಕಾರ್ಯಕ್ರಮ ಆಯೋಜನೆ; ನೂಕು ನುಗ್ಗಲು ಉಂಟಾಗಿ ಅಸ್ವಸ್ಥರಾದ 11ಕ್ಕೂ ಹೆಚ್ಚು ಜನ…!

ಬಂಟ್ವಾಳ: ದ.ಕ.ಜಿಲ್ಲಾ ತುಳು ನಾಟಕ ಕಲಾವಿದರ ಒಕ್ಕೂಟ ವಾರ್ಷಿಕ ಮಹಾಸಭೆ; ನೂತನ ಅಧ್ಯಕ್ಷರಾಗಿ ಕಿಶೋರ್ ಡಿ.ಶೆಟ್ಟಿ ಪುನರಾಯ್ಕೆ….!

ಬಂಟ್ವಾಳ: ಮೊಡಂಕಾಪು ಆಯ್ಯಪ್ಪ ಮಂದಿರದಲ್ಲಿ ನಡೆದ ಸಭೆಯಲ್ಲಿ ಮೂರನೇ ಅವಧಿಯ ಅಧ್ಯಕ್ಷರಾಗಿ ಆಯ್ಕೆಯಾದ ಸುನಿಲ್ ಎನ್

ಬಂಟ್ವಾಳ: ಸುರಿದ ಮಳೆಗೆ ಅವರಣಗೋಡೆ ಕುಸಿದು ಬಿದ್ದು ಹಾನಿ…!

ಪುತ್ತೂರಿನ ಪ್ರಕರಣ, ಕಾರ್ಕಳದ ಅಭಿಷೇಕ್ ಆತ್ಮಹತ್ಯೆಗೆ ಸಂಬಂಧಿಸಿ ಗ್ರಹಸಚಿವರಿಗೆ ಐವನ್ ಡಿಸೋಜಾ ಅವರಿಂದ ಮನವಿ

error: Content is protected !!