ಬಹು ಭಾಷಾ ಹಿರಿಯ ನಟಿ 87 ವರ್ಷದ ಬಿ. ಸರೋಜಾದೇವಿ ಬೆಂಗಳೂರಿನ ನಿವಾಸದಲ್ಲಿ ನಿಧನರಾಗಿದ್ದಾರೆ. ಕನ್ನಡ, ತಮಿಳು, ತೆಲುಗು ಹಿಂದಿ ಚಿತ್ರಗಳಲ್ಲಿ ಬಿ.ಸರೋಜಾದೇವಿ ಅನೇಕ ಚಿತ್ರಗಳಲ್ಲಿ ನಟಿಸಿದ್ರು.

ಅಭಿನಯ ಸರಸ್ವತಿಯೆಂದೆ ಸರೋಜಾದೇವಿ ಖ್ಯಾತಿ ಹೊಂದಿದ್ದು, ಸುಮಾರು ಆರು ದಶಕಗಳ ಕಾಲ ಚಿತ್ರರಂಗದಲ್ಲಿ ಸೇವೆ ಸಲ್ಲಿಸಿದ್ದಾರೆ. ಐದು ಭಾಷೆಗಳಲ್ಲಿ ಸುಮಾರು 250ಕ್ಕೂ ಹೆಚ್ಚು ಚಿತ್ರಗಳಲ್ಲಿ ಸರೋಜಾ ದೇವಿ ನಟಿಸಿದ್ದಾರೆ. ಡಾ.ರಾಜಕುಮಾರ್, ಕಲ್ಯಾಣ್ ಕುಮಾರ್ ಸೇರಿದಂತೆ ಅನೇಕ ಹಿರಿಯ ನಟರೊಂದಿಗೆ ಬಿ ಸರೋಜಾ ದೇವಿ ಅದ್ಭುತವಾಗಿ ನಟಿಸಿದ್ರು. ಕೈತುಂಬಾ ಸಿನಿಮಾಗಳಿರುವಾಗಲೇ, ಚಿತ್ರರಂಗದಲ್ಲಿ ನಂಬರ್ 1 ನಟಿ ಅಂತ ಯಶಸ್ಸಿನ ಉತ್ತುಂಗದಲ್ಲಿ ಮೆರೆಯುತ್ತಿರುವಾಗಲೇ ನಟಿ ಸರೋಜಾದೇವಿ ದಾಂಪತ್ಯ ಜೀವನಕ್ಕೆ ಕಾಲಿಟ್ರು. ಇಂಜಿನಿಯರ್ ಆಗಿದ್ದ ಶ್ರೀಹರ್ಷರವರೊಂದಿಗೆ ನಟಿ ಸರೋಜಾದೇವಿ ಮಾರ್ಚ್ 1, 1967 ರಂದು ಸಪ್ತಪದಿ ತುಳಿದ್ರು. ಮದುವೆ ನಂತರ ಪತಿಯ ಸಹಕಾರದೊಂದಿಗೆ ನಟನೆಯನ್ನೂ ಮುಂದುವರಿಸಿಕೊAಡು ಖುಷಿಯಿಂದ ಸಂಸಾರ ನಡೆಸುತ್ತಿದ್ರು. 1986ರಲ್ಲಿ ಹೃದಯಾಘಾತದಿಂದ ಶ್ರೀಹರ್ಷ ಮೃತಪಟ್ಟಿದ್ದಾರೆ.



