ಮೂಡುಬಿದಿರೆ ತಾಲೂಕು ತೆಂಕಮಿಜಾರು ಗ್ರಾಮ ಪಂಚಾಯತ್ ನ ಪಿಡಿಒ ರೋಹಿಣಿ ಬಿ, ದ್ವಿತೀಯ ದರ್ಜೆ ಲೆಕ್ಕ ಸಹಾಯಕ ರಮೇಶ್ ಬಂಗೇರಾ ಮತ್ತು ಪಂಚಾಯತ್ ಸಿಬ್ಬಂದಿ ಸತೀಶ್ ರವರು ಕರ್ತವ್ಯ ಲೋಪವೆಸಗಿ, ಬೇಜವಾಬ್ದಾರಿಯಿಂದ ವರ್ತಿಸುತ್ತಿದ್ದಾರೆ, ಇವರ ವಿರುದ್ಧ ನಿರ್ದಾಕ್ಷಿಣ್ಯ ಕಾನೂನು ಕ್ರಮವನ್ನು ಕೈಗೊಳ್ಳಬೇಕೆಂದು ತೆಂಕಮಿಜಾರು ಗ್ರಾಮ ಪಂಚಾಯತ್ ನ ಸದಸ್ಯೆಯಾದ ಯೋಗಿಣಿ ನಗರದ ಪತ್ರಿಕಾಭವನದಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಆಗ್ರಹಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತೆಂಕಮಿಜಾರು ಗ್ರಾಮ ಪಂಚಾಯತ್ 2023/24ನೇ ಸಾಲಿನ ಲೆಕ್ಕ ಪರಿಶೋಧನೆಯ ಅಧಿಕಾರಿಗಳ ವರದಿಯಲ್ಲಿ ಸುಮಾರು 1.81ಲಕ್ಷದಷ್ಟು ಹಣದ ಕೊರತೆ ಕಂಡು ಬಂದರೂ ಇದುವರೆಗೆ ಪಂಚಾಯತ್ ಆಡಳಿತಕ್ಕೆ ಮಾಹಿತಿ ನೀಡಿಲ್ಲ. ಅಲ್ಲದೇ ಈ ಕೊರತೆಯ ಬಗ್ಗೆ ಮಾಹಿತಿಯಿದ್ದರೂ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ದ್ವಿತೀಯ ದರ್ಜೆ ಸಹಾಯಕರಿಗೆ ಸೂಕ್ತ ನೋಟೀಸ್ ನೀಡದೇ, ನೋಟಿಸನ್ನು ಪಂಪ್ ಆಪರೇಟರ್ ನೀಡಿ,,, ಎಲ್ಲಾ ಆರೋಪಗಳನ್ನು ಪಂಪ್ ಆಪರೇಟರ್ ಮೇಲೆ ಹೋರಿಸಿರುತ್ತಾರೆ., ಸದ್ರಿ ಈ ಪ್ರಕರಣದಲ್ಲಿ ಪಂಚಾಯತ್ ಅಭಿವೃದ್ಧಿ ಅಧಿಕಾರಿ, ದ್ವಿತೀಯ ದರ್ಜೆ ಲೆಕ್ಕ ಸಹಾಯಕರು ಹಾಗೂ ಪಂಪ್ ಆಪರೇಟರ್ ನೇರವಾಗಿ ಅವ್ಯವಹಾರಗಳನ್ನು ಮಾಡಿರುವುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ. ಮೇ 30 ರಂದು ಪಂಚಾಯತ್ ಅಭಿವೃದ್ಧಿ ಅಧಿಕಾರಿಯವರು ಪಂಪ್ ಅಪರೇಟರ್ರವರಿಗೆ ನೋಟೀಸ್ ನೀಡಿದ್ದು, ನೋಟೀಸ್ ನೀಡಿದ ಮಾಹಿತಿಯಾಗಲಿ, ಅವ್ಯವಹಾರದ ಬಗ್ಗೆ ಮಾಹಿತಿಯಾಗಲಿ ಪಂಚಾಯತ್ ಆಡಳಿತಕ್ಕೆ ಮಾಹಿತಿ ನೀಡಿರುವುದಿಲ್ಲ, ಸದ್ರಿ ಪಂಪ್ ಆಪರೇಟರ್‌ಗೆ ನೋಟಿಸ್ ನೀಡಿದ ನಂತರದ 3 ತಿಂಗಳಿನಲ್ಲಿ ಸುಮಾರು 1.68, ಲಕ್ಷದಷ್ಟು ಹಣದ ಕೊರತೆ ಕಂಡುಬಂದಿರುತ್ತದೆ, ತೆಂಕಮಿಜಾರು ಗ್ರಾಮ ಪಂಚಾಯತಿಯ ಸಂಪೂರ್ಣ ನೀರಿನ ಸಮಿತಿಯ ವಸೂಲಾತಿ ಹಣ ದಿನವಹಿ ಪುಸ್ತಕದಲ್ಲಿ ನಮೂದಿಸಿರುವಂತೆ ಪಂಚಾಯತ್ ಬ್ಯಾಂಕ್ ಖಾತೆಗೆ ಜಮಾಯಾಗದಿರುವುದು ಕಂಡು ಬಂದಿದೆ, ಈ ಪ್ರಕರಣದಲ್ಲಿ ಪಂಚಾಯತ್ ಅಭಿವೃದ್ಧಿ ಅಧಿಕಾರಿಯವರು ಮತ್ತು ದ್ವಿತೀಯ ದರ್ಜೆ ಲೆಕ್ಕ ಸಹಾಯಕರು ಪರಿಶೀಲಿಸದೇ ಕರ್ತವ್ಯ ಲೋಪವೆಸಗಿ ಬೇಜವಾಬ್ದಾರಿಯಿಂದ ವರ್ತಿಸುತ್ತಿದ್ದಾರೆ. ಈ ಅವ್ಯವಹಾರಗಳ ಬಗ್ಗೆ, ಗ್ರಾಮಸ್ಥರು ಪಂಚಾಯತ್ ಸದಸ್ಯರಿಗೆ ಪ್ರಶ್ನಿಸಿದಾಗ ಸದಸ್ಯರ ಗಮನಕ್ಕೆ ಬಂದಿರುತ್ತದೆ, ಈ ಬಗ್ಗೆ 2025ರ ಮೇ ತಿಂಗಳ ಸಾಮಾನ್ಯ ಸಭೆಯಲ್ಲಿ ಸದಸ್ಯರು ಪಂಚಾಯತ್ ಅಭಿವೃದ್ಧಿ ಅಧಿಕಾರಿಯವರನ್ನು ಪ್ರಶ್ನಿಸಿದಾಗ ಅವ್ಯವಹಾರ ಬಗ್ಗೆ, ಸದಸ್ಯರ ಗಮನಕ್ಕೆ ತಂದಿರುತ್ತಾರೆ. ಪಂಚಾಯತ್ ನೀರು ಖಾತೆಯಲ್ಲಿ ಅವ್ಯವಹಾರ ಬಗ್ಗೆ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಗಮನಕ್ಕೆ ಬಂದಿದ್ದರೂ, 9/11 ಖಾತೆಗಳಿಗೆ ಸಂಬಂಧಿಸಿದ ಕೆಲಸದ ಜವಾಬ್ದಾರಿ ಪಂಪ್ ಆಪರೇಟರ್ ಸತೀಶ್ ರವರಿಗೆ ನೀಡಿದ್ದಾರೆ. ಇದನ್ನೆ ಸದಾವಕಾಶ ದಂತೆ ಬಳಸಿಕೊಂಡ ಸತೀಶ್ ರವರು ಕಲ್ಲಮೂಂಡೂರು ವ್ಯವಸಾಯ ಸೇವಾ ಸಹಕಾರಿ ಸಂಘದಲ್ಲಿ ಮಾಡಿದ ಸಾಲದ ವಿವರವನ್ನು9/11 ಖಾತೆಯಲ್ಲಿ ಡೀಲೀಟ್ ಮಾಡಿಸಿ, ಬೆಂಜನಪದವು ವ್ಯವಸಾಯ ಸೇವಾ ಸಹಕಾರಿ ಸಂಘದಲ್ಲಿ ಪಂಚಾಯತ್ ಸಿಬ್ಬಂದಿ ಸತೀಶ್ ಅವರ ಆದೇ ಜಮೀನಿಗೆ ಸಂಬಂಧಿಸಿದಂತೆ ಸಾಲ ಮಾಡಿರುತ್ತಾರೆ. ಮೇ 30 ರ ಸಾಮಾನ್ಯ ಸಭೆಯಂದು ಕಲ್ಲಮುಂಡೂರು ವ್ಯವಸಾಯ ಸೇವಾ ಸಹಕಾರಿ ಸಂಘ ಮತ್ತು ಬೆಂಜನಪದವು ವ್ಯವಸಾಯ ಸೇವಾ ಸಹಕಾರಿ ಸಂಘದ ಅಧಿಕಾರಿಗಳು ಪಂಚಾಯತ್ ಕಚೇರಿಗೆ ಭೇಟಿ ನೀಡಿ 9/11 ಎ ಖಾತೆಯ ಪ್ರತಿ ಪಡೆದಾಗ ಮತ್ತು ಪಂಚಾಯತ್ ಅಭಿವೃದ್ಧಿ ಅಧಿಕಾರಿಯವರು ಪಂಚಾಯತ್ ಸಿಬ್ಬಂದಿ ಸತೀಶ್ ರವರಿಗೆ ನೀಡಿದ ನೋಟೀಸ್ ಗಮನಿಸಿದಾಗ ಕಲ್ಲಮುಂಡೂರು ವ್ಯವಸಾಯ ಸೇವಾ ಸಹಕಾರಿ ಬ್ಯಾಂಕಿನ ದೃಢೀಕೃತ ಸಂದೇಶವಿಲ್ಲದೇ 9/11 ಖಾತೆಯಲ್ಲಿ ಡಿಲೀಟ್ ಮಾಡಿಸಿರುವುದು ಗಮನಕ್ಕೆ ಪಂಚಾಯತ್ ಸದಸ್ಯರ ಬಂದಿರುತ್ತದೆ. ಈ ಪ್ರಕರಣದಲ್ಲಿ ಪಂಚಾಯತ್ ಅಭಿವೃದ್ಧಿ ಅಧಿಕಾರಿಯವರು ಕಲ್ಲಮುಂಡೂರು ವ್ಯವಸಾಯ ಸೇವಾ ಸಹಕಾರಿ ಸಂಘದ ಸಾಲದ ವಿವರವನ್ನು ಡೀಲೀಟ್ ಮಾಡಿ, ಬೆಂಜನಪದವು ವ್ಯವಸಾಯ ಸೇವಾ ಸಹಕಾರಿ ಸಂಘದಲ್ಲಿ ಸಾಲ ಮಾಡಲು ಪಂಚಾಯತ್ ಸಿಬ್ಬಂದಿ ಸತೀಶ್ ರವರಿಗೆ ಸಹಕರಿಸಿರುವುದು ಮೇಲ್ನೋಟಕ್ಕೆ ಕಂಡುಬರುತ್ತಿದ್ದು ಇದು ಕ್ರಿಮಿನಲ್ ಮೊಕದ್ದಮೆಯಾಗಿದ್ದು ಈ ಪ್ರಕರಣವು, ಪಂಚಾಯತ್ ರಾಜ್ ವ್ಯವಸ್ಥೆ ಮೇಲೆ ಮತ್ತು ದಕ್ಷ ಅಧಿಕಾರಿಗಳ ಮೇಲೆ ಜನರಲ್ಲಿಯಿರುವ ವಿಶ್ವಾಸಾರ್ಹತೆ ಕಳೆದುಕೊಳ್ಳುವಂತೆ ಮಾಡಿದೆ… ಯಾವುದೇ ಬ್ಯಾಂಕಿನ ಲೋನ್ ಆ ಬ್ಯಾಂಕ್ ನ ಆನ್ಸೆನ್ ಸಂದೇಶವಿಲ್ಲದೇ ಮತ್ತು ಬ್ಯಾಂಕಿನ ದೃಢೀಕೃತ ಪತ್ರವಿಲ್ಲದೆ ಡಿಲೀಟ್ ಮಾಡಿಸಿರುವುದು ಗಂಭೀರ ಪ್ರಕರಣವಾಗಿದ್ದು ಈ ಬಗ್ಗೆ ಕೂಲಂಕುಷವಾಗಿ ಪರಿಶೀಲನೆ ನಡೆಯಬೇಕು. ಈ ಬಗ್ಗೆ ತಾಲೂಕು ಕಾರ್ಯನಿರ್ವಾಹಣಾಧಿಕಾರಿ, ಸಚಿವರು, ಮತ್ತು ಅಪರ ಮುಖ್ಯ ಕಾರ್ಯದರ್ಶಿಯವರು ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಯವರು ಸರಿಯಾದ ಕ್ರಮವನ್ನು ಕೈಗೊಳ್ಳಬೇಕೆಂದು ಆಗ್ರಹಿಸಿದರು. ಸುದ್ದಿಗೋಷ್ಠಿಯಲ್ಲಿ ತೆಂಕಮಿಜಾರು ಗ್ರಾಮ ಪಂಚಾಯತ್ ನ ಸದಸ್ಯರಾದ ದಿನೇಶ್ ಕೆ, ಲಿಂಗಪ್ಪ ಗೌಡ ಉಪಸ್ಥಿತರಿದ್ದರು .



