ಕೇರಳ ಮಾಜಿ ಸಿಎಂ ವಿ. ಎಸ್. ಅಚ್ಯುತಾನಂದನ್ ನಿಧನದ ಹಿನ್ನೆಲೆಯಲ್ಲಿ ಗೌರವಸೂಚಕವಾಗಿ ಕೇರಳ ರಾಜ್ಯದಲ್ಲಿ ಮೂರು ದಿನಗಳ ಶೋಕಾಚರಣೆ ನಡೆಯಲಿದೆ ಮತ್ತು ಇಂದು ರಾಜ್ಯಾದ್ಯಾಂತ ರಜೆ ಘೋಷಿಸಲಾಗಿದೆ.

ಹಾಗೆಯೇ ಕೇರಳದ ಎಲ್ಲಾ ಶೈಕ್ಷಣಿಕ, ಸ್ಥಳೀಯಾಡಳಿತ, ಸರಕಾರಿ, ಅರೆ ಸರಕಾರಿ ಸಂಸ್ಥೆಗಳಿಗೆ ಸರಕಾರಿ ಇಲಾಖೆ ರಜೆ ಘೋಷಿಸಿದೆ. ಹಾಗೂ ಮಂಗಳವಾರ ನಡೆಯಬೇಕಿದ್ದ ಎಲ್ಲಾ ಪರೀಕ್ಷೆಗಳನ್ನು ಮುಂದೂಡಲಾಗಿದೆ. ಖಾಸಗಿ ಬಸ್ ಮಾಲಕರ ಸಂಘ ಇಂದಿನಿಂದ ಆರಂಭಿಸುವುದಾಗಿ ಘೋಷಣೆ ಮಾಡಿದ್ದ ಬಸ್ ಮುಷ್ಕರವನ್ನು ಕೂಡ ಮುಂದೂಡಲಾಗಿದೆ. ಮಂಗಳವಾರ ತಿರುವನಂತಪುರದಲ್ಲಿ ಪಾರ್ಥಿವ ಶರೀರದ ಅಂತಿಮ ನಮನ ನಡೆಯಲಿದ್ದು ಬಳಿಕ ಶೋಕಯಾತ್ರೆಯ ಮೂಲಕ ಆಲಪ್ಪುಯ ಪುನ್ನಪ್ರ ಅವರ ಊರಿಗೆ ಪಾರ್ಥಿವ ಶರೀರ ತಲುಪಲಿದೆ. ಬುಧವಾರ ಅಂತ್ಯಕ್ರಿಯೆ ಜರುಗಲಿದೆ.



