ಮಾಣಿ ಸಮೀಪದ ಬೊಳ್ಳುಕಲ್ಲು ಎಂಬಲ್ಲಿ ಆಟೋ ರಿಕ್ಷಾ ಅಪಘಾತ ಸಂಭವಿಸಿದ ಪರಿಣಾಮ ಆಟೋ ರಿಕ್ಷಾದಲ್ಲಿದ್ದ ಮೂವರು ಮಕ್ಕಳು ಸಹಿತ ನಾಲ್ವರು ಗಾಯಗೊಂಡ ಘಟನೆ ನಡೆದಿದೆ.

ಮಾಣಿ ಕಡೆಯಿಂದ ಉಪ್ಪಿನಂಗಡಿ ಕಡೆಗೆ ಹೋಗುತ್ತಿದ್ದ ಆಟೋ ರಿಕ್ಷಾ ಚಾಲಕನ ನಿಯಂತ್ರಣ ಕಳೆದು ಪಲ್ಟಿ ಹೊಡೆದಿದೆ. ಉಪ್ಪಿನಂಗಡಿ ಬಂದಾರು ನಿವಾಸಿ ಸಮೀಕ್ಷ ,ಮೋಕ್ಷ, ಚಿರಣ್ವಿ, ಮೋನಪ್ಪ ಎಂಬವರು ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.



