ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಿಂದ ವಿಕುಭ ಹೆಬ್ಬಾರಬೈಲು ಸಂಪಾದಕತ್ವದಲ್ಲಿ ಹೊರಡುತ್ತಿರುವ, ದಶಮಾನೋತ್ಸವ ಸಂಭ್ರಮದಲ್ಲಿರುವ “ಪೂವರಿ” ತುಳು ಮಾಸಿಕದ ಜೂನ್ ತಿಂಗಳ ವಿಶೇಷ ಸಂಚಿಕೆಯು ಅಖಿಲ ಅಮೇರಿಕಾ ತುಳು ಅಂಗಣ ಯೂ.ಎಸ್.ಎ.(ಆಟ) ನೇತೃತ್ವದ `ಆಟ ಸಿರಿ ಪರ್ಬ- 2025′ ಸಮಾರಂಭದಲ್ಲಿ ಲೋಕಾರ್ಪಣೆಗೊಂಡು ಅಮೇರಿಕಾದ ಇತಿಹಾಸದಲ್ಲಿ ಹೊಸ ದಾಖಲೆ ಬರೆದಿದೆ.

ಜಗತ್ತಿನಲ್ಲಿ ಹರಡಿಕೊಂಡಿರುವ ಸುಮಾರು 2 ಕೋಟಿ ತುಳುವರ, ಸುಮಾರು 40 ಸಮುದಾಯದ ತುಳು ಮಾತೃ ಭಾಷೆಯಾಗಿರುವ ತುಳುನಾಡಿನ ಏಕೈಕ ತುಳು ಮಾಸಿಕ `ಪೂವರಿ’ ಪತ್ರಿಕೆ ಉತ್ತರ ಕೆರೋಲಿನಾ ರಾಜ್ಯದ ರಾಲೆ ನಗರದ ಟ್ರಯಾಂಗಲ್ ತುಳುವೆರೆ ಚಾವಡಿಯ ಆತಿಥ್ಯದಲ್ಲಿ ನಡೆದ ಅದ್ದೂರಿಯ ಸಮಾರಂಭದ ಮುಖ್ಯ ಅತಿಥಿಗಳಾದ ತುಳುನಾಡಿನ ಅಗೋಳಿ ಮಂಜಣ್ಣ ಕುಟುಂಬ ಸದಸ್ಯೆ ತೋಕೂರುಗುತ್ತು ಡಾ. ಸಾಯಿಗೀತಾ ಮಂಗಳೂರು, ಡಾ. ರವಿ ಶೆಟ್ಟಿ ಮೂಡಂಬೈಲು ಕತಾರ್, ಶೇಖರ ನಾಯ್ಕ್ ಕನೆಕ್ಟಿಕಟ್, ಆಟ ಸ್ಥಾಪಕ ಭಾಸ್ಕರ್ ಶೇರಿಗಾರ್ ಬೋಸ್ಟನ್, ಆಟ ಅಧ್ಯಕ್ಷ ಶ್ರೀವಲ್ಲಿ ರೈ ಮಾರ್ಟೆಲ್ ಫ್ಲೋರಿಡಾ, ಆಟ ಸಿರಿ ಪರ್ಬ ಸಂಚಾಲಕಿ ರಂಜನಿ ಅಸೈಗೋಳಿ ಉತ್ತರ ಕೆರೋಲಿನಾ, ಸುದರ್ಶನ ಶೆಟ್ಟಿ ಕೆನಡಾ, ಉಮೇಶ್ ಅಸೈಗೋಳಿ, ಸುರೇಶ್ ಶೆಟ್ಟಿ, ಡಾ. ಮೋಹನಚಂದ್ರ, ಡಾ. ಬೆಳ್ಳೆ ದಿನಕರ ರೈ ನ್ಯೂಯಾರ್ಕ್, ಡಾ. ರಾಜೇಂದ್ರ ಕೆದಿಲಾಯ, ಸ್ಯಾಮ್ಯುಯೆಲ್ ಡ್ರಾಗ್ ಮೋರ್ ಇವರ ಗಣ್ಯ ಉಪಸ್ಥಿತಿಯಲ್ಲಿ ಬಿಡುಗಡೆ ಗೊಂಡಿತು.

ಅಮೇರಿಕಾ ಸಂಯುಕ್ತ ರಾಜ್ಯಗಳ ಸಹಿತ ಕೆನಡಾ ದೇಶದ ವಿವಿಧ ಪ್ರದೇಶಗಳ ಸುಮಾರು 18 ತುಳು ಕೂಟಗಳು ಪ್ರತಿನಿಧಿಸುವ `ಅಖಿಲ ಅಮೇರಿಕಾ ತುಳು ಅಂಗಣ’ದ ತುಳುವರ ಮನೆ ಮನೆ ಸೇರುವ ಮೂಲಕ ಸುವರ್ಣ ಅಕ್ಷರಗಳಲ್ಲಿ ಬರೆದಿಡ ಬೇಕಾದ ಈ ದಿನ ತುಳುನಾಡಿನ ತುಳು ಪತ್ರಿಕೆಯೊಂದು ವಿಶ್ವದಲ್ಲಿ ಚಾರಿತ್ರಿಕ ಇತಿಹಾಸ ಸೃಷ್ಟಿಸಿದೆ.



