ಸುಬ್ರಹ್ಮಣ್ಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸರಕಾರಿ ಆಂಬುಲೆನ್ಸ್ ಚಾಲಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಕೆ.ಹೊನ್ನಪ್ಪ ದೇವರಗದ್ದೆಯವರು ಜುಲೈ 22ರಂದು ನಾಪತ್ತೆಯಾಗಿದ್ದರು.

ಈ ಸಂಬ0ಧವಾಗಿ ಅವರ ಪತ್ನಿ ಶ್ರೀಮತಿ ಪ್ರೇಮ ನೀಡಿದ ದೂರಿನ ಮೇಲೆ ಸುಬ್ರಹ್ಮಣ್ಯ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಾಗಿತ್ತು. ಪೊಲೀಸರು ಸಿಸಿ ಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ ಸಂದರ್ಭದಲ್ಲಿ ಹೊನ್ನಪ್ಪ ಅವರು ಒಂದು ಹೊಳೆಬದಿಗೆ ತೆರಳುತ್ತಿರುವ ದೃಶ್ಯಗಳು ಸಿಕ್ಕಿದ ಹಿನ್ನೆಲೆಯಲ್ಲಿ, ಕಳೆದ ಮೂರು ದಿನಗಳಿಂದ ಪೊಲೀಸರು, ಸ್ಥಳೀಯರು ಹಾಗೂ ರಕ್ಷಣಾ ತಂಡಗಳು ಶೋಧ ಕಾರ್ಯದಲ್ಲಿ ತೊಡಗಿದ್ರು.

ಅಂತಿಮವಾಗಿ, ಜುಲೈ 25ರಂದು ಹೊನ್ನಪ್ಪ ಅವರ ಮೃತದೇಹ ಕುಮಾರಧಾರ ನದಿಯಲ್ಲಿ ಸುಮಾರು 3 ಕಿಲೋಮೀಟರ್ ದೂರದಲ್ಲಿ ಪತ್ತೆಯಾಗಿದೆ. ಶೋಧ ಕಾರ್ಯದಲ್ಲಿ ಈಶ್ವರ್ ಮಲ್ಪೆ, ಎಸ್.ಡಿ.ಆರ್.ಎಫ್ ತಂಡ, ಸ್ಥಳೀಯರು, ರವಿಕಕ್ಕೆಪದವು ತಂಡ ಹಾಗೂ ಸುಳ್ಯದ ಅಂಬುಲೆನ್ಸ್ ಚಾಲಕರ ಸಂಘದವರು ಸಹಕಾರ ನೀಡಿದ್ದಾರೆ. ಘಟನೆಯ ಕುರಿತು ತನಿಖೆ ಮುಂದುವರಿದಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.



