ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಮಳೆಯ ಅಬ್ಬರ ಜಾಸ್ತಿಯಾಗುತ್ತಿದೆ. ಬಿರುಗಾಳಿ ಸಹಿತ ಮಳೆಯಾಗುತ್ತಿದೆ. ಭಾರೀ ಮಳೆಗೆ ಮಂಗಳೂರಿನ ಉಳ್ಳಾಲ ಬೈಲ್‌ನಲ್ಲಿ ಮನೆ ಕುಸಿತಗೊಂಡಿದೆ.

ಇನ್ನು ಗಾಳಿ ಮಳೆಗೆ ಬಂಟ್ವಾಳ ತಾಲೂಕಿನ ಅನೇಕ ಕಡೆಗಳಲ್ಲಿ ಮನೆಗಳಿಗೆ ಹಾನಿಯಾಗಿದ್ದು, ಲಕ್ಷಾಂತರ ರೂ ನಷ್ಟ ಸಂಭವಿಸಿದೆ. ಕಾವಲಮುಡೂರು ಗ್ರಾಮದಲ್ಲಿ ಮನೆಗೆ ಮರ ಬಿದ್ದು ಭಾಗಶಃ ಹಾನಿಯಾಗಿದೆ. ಪಿಲಾತಬೆಟ್ಟು ಗ್ರಾಮದಲ್ಲಿ ಮನೆಗೆ ಇಂದು ಬೆಳಿಗ್ಗೆ ಮರ ಬಿದ್ದು ಭಾಗಶಃ ಹಾನಿಯಾಗಿರುತ್ತದೆ. ಕೇಪು ಗ್ರಾಮದ ಗುತ್ತುದಡ್ಕ ಎಂಬಲ್ಲಿ ಮನೆಯ ಮುಂಭಾಗ ಆಳವಡಿಸಿರುವ ಶೀಟ್ ಛಾವಣಿ ಮೇಲೆ ಮರ ಬಿದ್ದು ಹಾನಿಯಾಗಿದೆ. ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ದೇವಸ್ಯ ಪಡೂರು ಗ್ರಾಮದಲ್ಲಿ ಮನೆಯ ಹಿಂಭಾಗದ ಗೋಡೆ ಕುಸಿತವಾಗಿ ಹಾನಿಯಾಗಿದೆ. ಹೀಗೆ ಅನೇಕ ಕಡೆಗಳಲ್ಲಿ ಪಾಕೃತಿಕ ಹಾನಿಯಾಗಿದೆ.



