ಜನ ಮನದ ನಾಡಿ ಮಿಡಿತ

Advertisement

ಮಂಗಳೂರು: ಹೊಸ ಚಿಂತನೆಗಳನ್ನು ಅರಸುವ ಸಲುವಾಗಿ ಮಂಗಳೂರಿನ ಎಂ.ಸಿ.ಸಿ.ಬ್ಯಾಂಕ್ ಚಿಂತನಾ ಶೃಂಗ 2025

ಬ್ಯಾಂಕಿಂಗ್ ಕ್ಷೇತ್ರದಲ್ಲಿ ಹೊಸ ಕ್ಷಿತಿಜಗಳನ್ನು ಅನ್ವೇಷಿಸುವ ಮತ್ತು ಮುಂದಿನ ಬೆಳವಣಿಗೆಗೆ ಹೊಸ ಚಿಂತನೆಗಳನ್ನು ಅರಸುವ ಸಲುವಾಗಿ ಮಂಗಳೂರಿನ ಎಂ.ಸಿ.ಸಿ.ಬ್ಯಾಂಕ್ ಚಿಂತನಾ ಶೃಂಗ 2025ನ್ನು ಆಯೋಜಿಸಿತ್ತು. ಅತ್ತಾವರದ ಹೊಟೇಲ್ ಅವತಾರ್ ನಲ್ಲಿ ನಡೆದ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಂ.ಸಿ.ಸಿ. ಬ್ಯಾಂಕ್ ಅಧ್ಯಕ್ಷ ಸಹಕಾರ ರತ್ನ ಅನಿಲ್ ಲೋಬೋ ವಹಿಸಿದ್ದರು.

ಸಭೆಯಲ್ಲಿ ಎಂ.ಸಿ.ಸಿ. ಬ್ಯಾಂಕಿನ ಬೆಳವಣಿಗೆಯ ಮಾಹಿತಿಯನ್ನು ಪ್ರಸ್ತುತಪಡಿಸಲಾಯಿತು. ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಬಿಷಪ್ ಜೆರಾಲ್ಡ್ ಐಸಾಕ್ ಲೋಬೋ ಅವರು ಬ್ಯಾಂಕ್ ಕಳೆದ ಒಂದು ಶತಮಾನದಲ್ಲಿ ಸಾಗಿ ಬಂದ ಪ್ರಯಾಣವನ್ನು ಉಲ್ಲೇಖಿಸಿದ್ರು. ಕಳೆದ ಏಳು ವರ್ಷಗಳಲ್ಲಿ ಸಾಧಿತವಾದ ತ್ವರಿತಗತಿಯ ಪ್ರಗತಿ ಮುಂದೆಯೂ ಮುಂದುವರಿಯಬೇಕು ಬ್ಯಾಂಕ್ ಆಧುನಿಕ ತಂತ್ರಜ್ಞಾನ ಅಳವಡಿಸಿಕೊಳ್ಳ ಬೇಕು ಎಂದೂ ಅವರು ಸಲಹೆ ಮಾಡಿದ್ರು. ಮಂಗಳೂರು ಬಿಷಪ್ ರೆವೆರೆಂಡ್ ಡಾ. ಪೀಟರ್ ಪೌಲ್ ಸಲ್ದಾನ ಮಾತನಾಡಿ ಗುಣ ಮಟ್ಟದ ಮತ್ತು ನಗುಮೊಗದ ಸೇವೆ ಇದ್ದರೆ ಗ್ರಾಹಕರು ಹೆಚ್ಚುತ್ತಾರೆ ಎಂದ್ರು. ದಿಕ್ಸೂಚಿ ಭಾಷಣ ಮಾಡಿದ ಮೈಕೆಲ್ ಡಿಸೋಜಾ ಬ್ಯಾಂಕಿನ ದೀರ್ಘ ಕಾಲೀನ ಯೋಜನೆಗೆ ಇಂತಹ ಚಿಂತನ ಕಾರ್ಯಕ್ರಮಗಳು ಹೊಸ ನೋಟವನ್ನು ಒದಗಿಸುತ್ತವೆ ಎಂದರು. ಅಧ್ಯಕ್ಷ ಭಾಷಣ ಮಾಡಿದ ಸಹಕಾರ ರತ್ನ ಅನಿಲ್ ಲೋಬೋ ಬಂದಿರುವ ಸಲಹೆ ಸೂಚನೆಗಳು ಬಹಳ ಉಪಯುಕ್ತವಾದಂತಹವು ಎಂದು ಶ್ಲಾಘಿಸಿದ್ದಾರೆ. ಇನ್ನು ಈ ಸಂದರ್ಭದಲ್ಲಿ ಮ್ಯಾಕ್ಸಿಂ ಫೆರ್ನಾಂಡೀಸ್, ಡಾ.ಅಲೋಶಿಯಸ್ ಸಿಕ್ವೇರಾ, ಎಲ್. ಅರ್ಹಾನ್ನ, ಅಲೆನ್ ಪಿರೇರಾ, ಫೌಸ್ಟಿನ್ ಲೋಬೋ, ಡಾ. ವಿನ್ಸೆಂಟ್ ಆಳ್ವಾ , ಪೀಯುಸ್ ರೋಡ್ರಿಗಸ್, ಅಲ್ವಿನ್ ಕ್ರಾಸ್ಟಾ, ಮತ್ತಿತರರು ಪಾಲ್ಗೊಂಡಿದ್ದರು.

 

Leave a Reply

Your email address will not be published. Required fields are marked *

ದುಬೈ: ಅಕ್ಟೋಬರ್ 25 ರಂದು ದುಬೈನಲ್ಲಿ ದುಬೈ ಗಡಿನಾಡ ಉತ್ಸವ

ಮಂಗಳೂರು: ಅಶೋಕ ಜನಮನ ಕಾರ್ಯಕ್ರಮ ಆಯೋಜನೆ; ನೂಕು ನುಗ್ಗಲು ಉಂಟಾಗಿ ಅಸ್ವಸ್ಥರಾದ 11ಕ್ಕೂ ಹೆಚ್ಚು ಜನ…!

ಬಂಟ್ವಾಳ: ದ.ಕ.ಜಿಲ್ಲಾ ತುಳು ನಾಟಕ ಕಲಾವಿದರ ಒಕ್ಕೂಟ ವಾರ್ಷಿಕ ಮಹಾಸಭೆ; ನೂತನ ಅಧ್ಯಕ್ಷರಾಗಿ ಕಿಶೋರ್ ಡಿ.ಶೆಟ್ಟಿ ಪುನರಾಯ್ಕೆ….!

ಬಂಟ್ವಾಳ: ಮೊಡಂಕಾಪು ಆಯ್ಯಪ್ಪ ಮಂದಿರದಲ್ಲಿ ನಡೆದ ಸಭೆಯಲ್ಲಿ ಮೂರನೇ ಅವಧಿಯ ಅಧ್ಯಕ್ಷರಾಗಿ ಆಯ್ಕೆಯಾದ ಸುನಿಲ್ ಎನ್

ಬಂಟ್ವಾಳ: ಸುರಿದ ಮಳೆಗೆ ಅವರಣಗೋಡೆ ಕುಸಿದು ಬಿದ್ದು ಹಾನಿ…!

ಪುತ್ತೂರಿನ ಪ್ರಕರಣ, ಕಾರ್ಕಳದ ಅಭಿಷೇಕ್ ಆತ್ಮಹತ್ಯೆಗೆ ಸಂಬಂಧಿಸಿ ಗ್ರಹಸಚಿವರಿಗೆ ಐವನ್ ಡಿಸೋಜಾ ಅವರಿಂದ ಮನವಿ

ಮಂಗಳೂರು: ಪೊಲೀಸ್ ಠಾಣಾ ವ್ಯಾಪ್ತಿಯ ಮೂರು ಕಡೆ ಜಾನುವಾರು ವಧೆ…!

ಉಡುಪಿ: ಅಂಬಲಪಾಡಿಯಲ್ಲಿ ನೇಣಿಗೆ ಶರಣಾದ ಯುವಪ್ರೇಮಿಗಳು….!

ಮಂಗಳೂರು: ಮಾಧವ ಕೊಳತ್ತ ಮಜಲು ಅವರಿಗೆ ಕದ್ರಿ ಬಾಲಕೃಷ್ಣ ಶೆಟ್ಟಿ ಪ್ರಶಸ್ತಿ..!

error: Content is protected !!