ಮುಲ್ಕಿ: ನೆಹರು ಯುವ ಕೇಂದ್ರ ಮಂಗಳೂರು ಜಿಲ್ಲಾ ಮತ್ತು ರಾಜ್ಯ ಪ್ರಶಸ್ತಿ ವಿಜೇತ ಯುವಕ ಸಂಘ (ರಿ.) ತೋಕೂರು, ರಜತ ಮಹೋತ್ಸವ ಸಮಿತಿ ಮಹಿಳಾ ಮಂಡಲ (ರಿ.) ತೋಕೂರು ರೋಟರಿ ಸಮುದಾಯ ದಳ ತೋಕೂರು ಇವರ ಸಂಯುಕ್ತ ಆಶ್ರಯದಲ್ಲಿ ವಿವಿಧ ರೀತಿಯ ಫಲ ಪುಷ್ಪದ ಗಿಡಗಳನ್ನು ನೆಡುವುದರ ಮೂಲಕ ವನ ಮಹೋತ್ಸವವನ್ನು ಆಚರಿಸಲಾಯಿತು. ಶ್ರೀ ಪ್ರಕಾಶ್ ಓ.ಆರ್ ಇವರು ಕಾರ್ಯಕ್ರಮ ದಲ್ಲಿ ಭಾಗವಹಿಸಿ ಗಿಡಗಳನ್ನು ಒದಗಿಸಿಕೊಟ್ಟು ,ಗಿಡ ನೆಟ್ಟು ಸಹಕರಿಸಿ ,ಪ್ರಕೃತಿ ಸಂರಕ್ಷಣೆ ನಮ್ಮೆಲ್ಲರ ಹೊಣೆ ಎಂದು ಸಾಂದರ್ಭಿಕವಾಗಿ ನುಡಿದರು. ಯುವಕ ಸಂಘದ ಅಧ್ಯಕ್ಷರಾದ ಶ್ರೀ ಶೇಖರ್ ಶೆಟ್ಟಿಗಾರ್, ಮಹಿಳಾ ಮಂಡಲದ ಅಧ್ಯಕ್ಷರಾದ ಅನುಪಮಾ ಎ ರಾವ್, ರಜತ ಮಹೋತ್ಸವ ಸಮಿತಿಯ ಗೌರವಾಧ್ಯಕ್ಷರಾದ ಯಶೋದ ಪಿ ರಾವ್ ಹಾಗೂ ರೋಟರಿ ಸಮುದಾಯದಳದ ಅಧ್ಯಕ್ಷರಾದ ಹೇಮನಾಥ ಅಮೀನ್ ಹಾಗೂ ಜಂಟಿ ಸಂಸ್ಥೆಗಳ ಸದಸ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.




