10ಕೆಜಿ ತೂಕದ ಸುಮಾರು 8ಸಾವಿರ ಬೆಲೆ ಬಾಳುವ ತಾಮ್ರದ ಗಂಟೆ ಕಳ್ಳತನ ಮಾಡಿದ್ದ ಆರೋಪಿಯನ್ನು ಪುತ್ತೂರು ನಗರ ಠಾಣಾ ಪೊಲೀಸರು ಅರೆಸ್ಟ್ ಮಾಡಿದ್ದಾರೆ.

ಬಂಧಿತನನ್ನು 50ವರ್ಷದ ಕಬಕ ನಿವಾಸಿ ಸಂಶುದ್ದೀನ್ ಆಲಿಯಾಸ್ ಸಂಶು ಎಂದು ಗುರುತಿಸಲಾಗಿದೆ. ಜುಲೈ 26ರಂದು ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಗಂಟೆ ಕಳವು ಆಗಿರುವ ಕುರಿತು ಸಂಬಂಧಪಟ್ಟವರು ದೂರನ್ನ ನೀಡಿದ್ರು. ಅದ್ರಂತೆ ಇದೀಗ ಪೊಲೀಸರು ಆರೋಪಿಯನ್ನು ಪತ್ತೆ ಹಚ್ಚಿ ಬಂಧಿಸಿದ್ದಾರೆ.



