ಸ್ವಾತಂತ್ರ್ಯ ದಿನದಂದು ಸಂಜೆ ವೇಳೆ ಮೇಯುತ್ತಿದ್ದ ದನವನ್ನು ಕದ್ದುಕೊಂಡು ಹೋಗಿದ್ದಾರೆ ಎಂದು ದನದ ಮಾಲೀಕರು ಸಂಶಯ ವ್ಯಕ್ತಪಡಿಸಿದ್ದಾರೆ.

ವಳವೂರು ನಡಿಬೆಟ್ಟು ನಿವಾಸಿ ಕಾರ್ತಿಕ್ ಎಂಬವರಿಗೆ ಸೇರಿದ ದನವನ್ನು ಯಾರೋ ಕಳ್ಳರು ಕಳವು ಮಾಡಿ ಬಳಿಕ ವದೆ ಮಾಡಿರುವ ಬಗ್ಗೆ ದೂರು ನೀಡಿದ್ದಾರೆ. ಇವರ ಬಳಿ 3 ಹಸುಗಳು ಇದ್ದು ಭಾರತ್ ಅಗ್ರೋವೆಟ್ ಸಮೀಪದ ಮೈದಾನದಲ್ಲಿ ಮೇಯುತ್ತಿದ್ದ ಒಂದು ಹಸುವನ್ನು ಕಳವು ಮಾಡಿದ್ದಾರೆ.

ಮೈದಾನದಲ್ಲಿ ಹುಡುಕಾಟ ನಡೆಸಿದಾಗ ಪತ್ತೆಯಾಗದೆ ಇದ್ದು ಬಳಿಕ ನೇತ್ರಾವತಿ ನದಿಗೆ ಸಂಪರ್ಕಿಸುವ ತೋಡು ಬದಿಯಲ್ಲಿ ಪೊದೆಗಳಿಂದ ಕೂಡಿದ ಪ್ರದೇಶದಲ್ಲಿ ದನವನ್ನು ಹತ್ಯೆ ಮಾಡಿ ಮಾಂಸ ಮಾಡಿದ ಕುರುಹುಗಳು ಪತ್ತೆಯಾಗಿವೆ. ಇದೀಗ ಆರೋಪಿಗಳಿಗಾಗಿ ಪೋಲೀಸ್ ತಂಡ ಕಾರ್ಯಚರಣೆ ನಡೆಸುತ್ತಿದ್ದಾರೆ.



