ಕಳೆದ ಮೂರು ದಿನಗಳಿಂದ ಮತ್ತೆ ಜೋರಾಗಿ ಮಳೆ ಸುರಿಯುತ್ತಿದ್ದು, ನೇತ್ರಾವತಿ ನದಿಯ ನೀರಿನ ಮಟ್ಟದಲ್ಲಿ ಮತ್ತೆ ಏರಿಕೆ ಕಂಡಿದೆ.

ಬೆಳಿಗ್ಗೆ ನೀರಿನ ಮಟ್ಟ 7.1 ಮೀ ಆಗಿದ್ದು, ಘಟ್ಟ ಪ್ರದೇಶಗಳಲ್ಲಿ ಕೂಡ ಅತಿಯಾದ ಮಳೆಯಾಗುತ್ತಿದೆ. ಹೀಗಾಗಿ ಮತ್ತೆ ನೇತ್ರಾವತಿ ನದಿಯ ನೀರಿನ ಮಟ್ಟ ಏರಿಕೆಯಾಗುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ. ನೀರು ಏರಿಕೆಯಾಗಿ 8 ಮೀ ತಲುಪಿದರೆ ಬಂಟ್ವಾಳದ ಕೆಲವು ತಗ್ಗು ಪ್ರದೇಶಗಳು ಜಲಾವೃತಗೊಳ್ಳುವ ಭೀತಿ ಸ್ಥಳೀಯರನ್ನು ಕಾಡುತ್ತಿದೆ.



