ಉಡುಪಿಯಿಂದ ಮಂಗಳೂರಿಗೆ ತನ್ನ ಸ್ನೇಹಿತರಾದ ವಿಡಿಯೋ ಎಡಿಟರ್ ಪ್ರಜ್ವಲ್ ಸುವರ್ಣ ಮತ್ತು ಪ್ರಸಾದ್ ಅವರೊಂದಿಗೆ ಪ್ರಯಾಣಿಸುತ್ತಿದ್ದಾಗ ಮುಳೂರು ಬಳಿ ನಡೆದ ಕಾರು ಅಪಘಾತದಲ್ಲಿ 28 ವರ್ಷದ ಛಾಯಾಗ್ರಾಹಕ ಡಿಜೆ ಮರ್ವಿನ್ ಅವರು ಮೃತಪಟ್ಟು, ಇನ್ನಿಬ್ಬರು ಗಾಯಗೊಂಡ ಘಟನೆ ನಡೆದಿದೆ.

ನಾಯಿಗೆ ಢಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋಗಿ ಕಾರು ಪಲ್ಟಿಯಾಗಿ ಈ ಘಟನೆ ಸಂಭವಿಸಿದೆ ಎನ್ನಲಾಗಿದೆ. ಆಂಬ್ಯುಲೆನ್ಸ್ ಚಾಲಕರಾದ ಜಲಾಲುದ್ದೀನ್, ಹಮೀದ್ ಉಚ್ಚಿಲ, ಕೆ.ಎಂ. ಸಿರಾಜ್, ಅನ್ವರ್ ಮತ್ತು ಪೊಲೀಸ್ ಅಧಿಕಾರಿಗಳು ತಕ್ಷಣ ಮೂವರು ಗಾಯಾಳುಗಳನ್ನು ಉಡುಪಿಯ ಖಾಸಗಿ ಆಸ್ಪತ್ರೆಗೆ ಸಾಗಿಸಿದರೂ ಅದಾಗಲೇ ಮರ್ವಿನ್ ಅವರು ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ಧಾರೆ, ಆದರೆ ಪ್ರಜ್ವಲ್ ಮತ್ತು ಪ್ರಸಾದ್ ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ. ಅಪಘಾತಕ್ಕೆ ಒಂದು ದಿನ ಮೊದಲು, ಮರ್ವಿನ್ ತಮ್ಮ ಹೊಸ ಹಾಡನ್ನು ಯೂಟ್ಯೂಬ್‌ನಲ್ಲಿ ಬಿಡುಗಡೆ ಕೂಡ ಮಾಡಿದ್ದರು, ಅದನ್ನು ಅವರು ಎಪಿಡಿ ಮ್ಯೂಸಿಕ್‌ಗಾಗಿ ನಿರ್ಮಿಸಿ ಸ್ವತಃ ಚಿತ್ರೀಕರಣ ಮಾಡಿದ್ದರು. ಅವರು ಛಾಯಾಗ್ರಾಹಕರಾಗಿ ಹಲವಾರು ಕೊಂಕಣಿ ಮತ್ತು ತುಳು ಚಲನಚಿತ್ರ ಯೋಜನೆಗಳಲ್ಲಿ ಕೆಲಸ ಮಾಡಿದ್ದರು, ತಮ್ಮ ಸೃಜನಶೀಲ ಪ್ರತಿಭೆಯನ್ನು ಹೊಂದಿದ್ದರು.



