11 ವರ್ಷ ಪ್ರಾಯದ ಸಿದ್ಧಾರ್ಥ್ ಶೆಟ್ಟಿ, ತಂದೆ -ದಿ. ಸಂಜು ಮತ್ತು ತಾಯಿ ರಂಜಿತ ಅವರ ಮುದ್ದಿನ ಮಗ. ಎಳವೆಯಲ್ಲೇ ತಂದೆಯನ್ನು ಕಳೆದುಕೊಂಡರೂ ತಾಯಿ ನೀಡಿದ ಪ್ರೋತ್ಸಾಹ ಕಲಾಕ್ಷೇತ್ರದಲ್ಲಿ ಮಿನುಗುವಂತೆ ಮಾಡಿತು.

ಶಿವಮೊಗ್ಗದ ಬೇಲೂರಿನಲ್ಲಿ ಜನಸಿದ ಈತ ಮಲ್ನಾಡ್ ಇಂಟರ್ ನ್ಯಾಷನಲ್ ಸ್ಕೂಲ್ ಶಿವಮೊಗ್ಗ ಇಲ್ಲಿ 6 ನೆ ತರಗತಿಯ ವಿಧ್ಯಾರ್ಥಿಯಾಗಿದ್ದಾನೆ. ನೃತ್ಯ, ನಟನೆ, ಕರಾಟೆ, ಸ್ಪೋರ್ಟ್ಸ್ ಇವೆಲ್ಲವೂ ಈತನಿಗೆ ಅಚ್ಚುಮೆಚ್ಚು. ಸಿದ್ಧಾರ್ಥ್ 6 ವರ್ಷದಿಂದ ನೃತ್ಯ ಕಲಿಯುವತ್ತ ಆಸಕ್ತಿ ಹೊಂದಿದ್ದಾನೆ. ಹಲವಾರು ನೃತ್ಯ ಸ್ಪರ್ದೆಯಲ್ಲಿ ಭಾಗವಹಿಸಿ ಬಹುಮಾನ ಗೆದ್ದು ಮಂಗಳೂರಿನ ಸ್ಪಂದನ ಟಿವಿ, ಜೂಮ್ ಟಿವಿ, ಸುವರ್ಣ ಚಾನಲ್ ನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ.

ಈತನಿಗೆ ಕರ್ನಾಟಕ ಬಾಲ ರತ್ನ 2022, ಸಾಧಕ ರತ್ನ 2022,ಸುವರ್ಣ ಸಾಧನ ಶ್ರೀ ಪ್ರಶಸ್ತಿ, ಸೇವಾ ರತ್ನ 2023 ಈತನ ಕಲಾಸೇವೆಗೆ ಸಂದ ಗೌರವ. 2023- 24ರ ಅಚೀವ್‌ಮೆಂಟ್ ಅವಾರ್ಡ್, ಹಿಪ್ ಹಾಪ್ ಡ್ಯಾನ್ಸ್ ನ್ಯಾಷನಲ್ ಲೆವೆಲ್ ಮತ್ತು ಇಂಟರ್‌ನ್ಯಾಷನಲ್ ಲೆವೆಲ್ ಗೋಲ್ಡ್ ಮೆಡಲಿಸ್ಟ್, ನೇಪಾಳದಲ್ಲಿ ನಡೆದ ಹಿಪ್ ಹಾಪ್ ಚಾಂಪಿಯನ್‌ಶಿಪ್ ನಲ್ಲಿ ಭಾರತವನ್ನು ಪ್ರತಿನಿಧಿಸಿ 2 ವಿಭಾಗದಲ್ಲಿ ಭಾಗವಹಿಸಿ 2 ಗೋಲ್ಡ್ ಮೆಡಲ್ ಪಡೆದಿರುತ್ತಾನೆ.

ಅದಲ್ಲದೆ ಕರಾಟೆ ನ್ಯಾಷನಲ್ ಮತ್ತು ಇಂಟರ್‌ನ್ಯಾಷನಲ್ ಲೆವೆಲ್ ಅಲ್ಲಿ ಭಾಗವಹಿಸಿ ಮೊದಲ ಸ್ಥಾನ ಪಡೆದಿರುವುದು ಎಳವೆಯಲ್ಲೇ ಈತನ ಸಾಧನೆಯ ಶಿಖರಕ್ಕೆ ಮುನ್ನುಡಿಯಾಗಿದೆ.



