ಕೊಂಕಣಿ ಭಾಷೆ ಮತ್ತು ಸಂಸ್ಕೃತಿಯ ರಕ್ಷಣೆಗೆ ತನ್ನ ಬದುಕನ್ನು ಮುಡಿಪಾಗಿಟ್ಟಿದ್ದ ಎರಿಕ್ ಒಝಾರಿಯೋ ಅಲ್ಪ ಕಾಲದ ಅನಾರೋಗ್ಯದಿಂದ ಮಂಗಳೂರಿನ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.

ಕೊಂಕಣಿ ಸಂಗೀತ ಹಾಗೂ ಸಂಸ್ಕೃತಿ ಪರಂಪರೆಯ ಶ್ರೇಷ್ಠ ದೂತನಾದ 76 ವರ್ಷ ಪ್ರಾಯದ ಏರಿಕ್ ಅಲೆಕ್ಸಾಂಡರ್ ಓಜಾರಿಯೋರವರು ಕಿಡ್ನಿಸಂಬಂಧಿ ಅಸೌಖ್ಯದಿಂದ ಮಂಗಳೂರಿನ ಫಾದರ್ ಮಲ್ಲರ್ ಆಸ್ಪತ್ರೆಗೆ ದಾಖಲಾಗಿದ್ದರು. ಅಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಇಂದು ಆಗಸ್ಟ್ 29ರಂದು ಶುಕ್ರವಾರ ಇಹಲೋಕ ತ್ಯಜಿಸಿದ್ದಾರೆ. ಅವರು ಖ್ಯಾತ ಸಂಗೀತ ನಿರ್ದೇಶಕ, ಸಂಸ್ಕೃತಿ ಹೋರಾಟಗಾರ ಹಾಗೂ ಕೊಂಕಣಿ ಭಾಷಾ ಪ್ರೇಮಿಯಾಗಿ ಹೆಸರು ವಾಸಿಯಾದರು.



