ಸರಪಾಡಿ ಶ್ರೀ ಶರಭೇಶ್ವರ ದೇವಸ್ಥಾನಕ್ಕೆ ಸಂಬಂಧಪಟ್ಟ ಶಾಂತಿಗುಡ್ಡೆ ಶ್ರೀ ರಕ್ತೇಶ್ವರೀ ದೈವದ ವಲಸರಿ ಆಗಮಿಸುವುದಕ್ಕೆ ಶಿಲಾಮಯ ಮೆಟ್ಟಿಲುಗಳ ನಿರ್ಮಾಣಕ್ಕೆ ದೇವಸ್ಥಾನದ ಜೀರ್ಣೋದ್ಧಾರ ಸಮಿತಿಯ ವತಿಯಿಂದ ಶಿಲಾನ್ಯಾಸ ನೆರವೇರಿಸಲಾಯಿತು.

ದೇವಸ್ಥಾನದ ಪ್ರಧಾನ ಅರ್ಚಕ ಶಂಕರನಾರಾಯಣ ಹೊಳ್ಳ ಹಾಗೂ ಪುರೋಹಿತ ವಿಜಯಕೃಷ್ಣ ಐತಾಳ್ ಪೂಂಜೂರು ಅವರು ಧಾರ್ಮಿಕ ವಿಧಿ ನೆರವೇರಿಸಿದರು. ಸರಪಾಡಿ ಅರಮನೆಯ ನರಸಿಂಹ ಐತಾಳ್ ಶಿಲಾನ್ಯಾಸ ನೆರವೇರಿಸಿದರು. ಶಿಲ್ಪಿಯವರ ಪರವಾಗಿ ರಮೇಶ್ ಅವರಿಗೆ ವೀಳ್ಯ ಹಸ್ತಾಂತರಿಸಿದರು. ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಎಂ.ಎಸ್.ಶೆಟ್ಟಿ ಸರಪಾಡಿ, ಕಾರ್ಯಾಧ್ಯಕ್ಷ ಜಗನ್ನಾಥ ಚೌಟ ಬದಿಗುಡ್ಡೆ, ಪ್ರಧಾನ ಕಾರ್ಯದರ್ಶಿ ನಾರಾಯಣ ಶೆಟ್ಟಿ ಹೊಳ್ಳರಗುತ್ತು, ಮತ್ತಿತ್ತರರು ಉಪಸ್ಥಿತರಿದ್ದರು.



