ಜನ ಮನದ ನಾಡಿ ಮಿಡಿತ

Advertisement

ಮೋದಿ ಸರ್ಕಾರದಿಂದ ಬಂಪರ್ ಆಫರ್….ನವರಾತ್ರಿ ಮೊದಲ ದಿನದಿಂದಲೇ ಜಾರಿಯಾದ ರೂಲ್ಸ್

ದೇಶದ ಜನರಿಗೆ ದಸರಾ-ದೀಪಾವಳಿಗೆ ಕೇಂದ್ರ ಸರ್ಕಾರ ಭರ್ಜರಿ ಆಫರ್ ನೀಡಿದೆ. ಜನರ ಜೇಬಿಗೆ ಜಿಎಸ್‌ಟಿ ದರ ಹಾಕುತ್ತಿರೋ ಬರೆಯನ್ನು ಕೊಂಚ ಕಡಿಮೆ ಮಾಡಿದೆ.

ಕೆಂಪುಕೋಟೆ ಮೇಲೆ ನಿಂತು ಪ್ರಧಾನಿ ಮೋದಿ ನೀಡಿದ್ದ ವಾಗ್ದಾನ ನಿಜವಾಗಿದೆ. ದೇಶದಲ್ಲಿ ಎಲ್ಲ ಫುಡ್, ಟೆಕ್ಸ್ ಟೈಲ್ ಉತ್ಪನ್ನಗಳ ಮೇಲಿನ ಜಿಎಸ್‌ಟಿ ದರ ಇಳಿಕೆಯಾಗಿದೆ. ದಸರಾ, ದೀಪಾವಳಿಗೆ ಮೋದಿ ಸರ್ಕಾರ ದೇಶದ ಜನರಿಗೆ ಸಿಹಿಸುದ್ದಿಯನ್ನ ನೀಡಿದೆ. ಬಡ-ಮಧ್ಯಮ ವರ್ಗಕ್ಕೆ ದಸರಾಗೂ ಮೊದಲೇ ದೀಪಾವಳಿ ಸಂಭ್ರಮಿಸುವ ಸಮಯ ಬಂದಿದೆ. ಜಿಎಸ್‌ಟಿ ಕೌನ್ಸಿಲ್ ಸಭೆಯಲ್ಲಿ ಟ್ಯಾಕ್ಸ್ ಕ್ರಾಂತಿ ಮೊಳಗಿದೆ. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಜಿಎಸ್‌ಟಿ ಬಗ್ಗೆ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ. 4 ಸ್ಲ್ಯಾಬ್‌ಗಳ ಬದಲು 2 ಸ್ಲ್ಯಾಬ್‌ಗಳಲ್ಲಿ ಜಿಎಸ್‌ಟಿ ಜಾರಿಗೆ ಕೇಂದ್ರ ಸರ್ಕಾರ ತೀರ್ಮಾನ ಮಾಡಿದೆ. ಶೇ.5 ಮತ್ತು ಶೇ. 18ರ ಸ್ಲ್ಯಾಬ್‌ಗಳನ್ನ ಮಾತ್ರ ಉಳಿಸಿಕೊಳ್ಳಲು ಒಪ್ಪಿಗೆ ನೀಡಿದೆ.

ಇದ್ರಿಂದ ದೇಶದ ಮಧ್ಯಮ ವರ್ಗದವರಿಗೆ ಭರ್ಜರಿ ಗುಡ್‌ನ್ಯೂಸ್ ಸಿಕ್ಕಿದೆ. ಚಾಕೋಲೆಟ್, ಕಾಫಿ, ಇನ್‌ಸ್ಟಾಂಟ್ ನೂಡಲ್ಸ್, ಪಾಸ್ತಾ, ಬೆಣ್ಣೆ, ತುಪ್ಪ, ಸಾಸ್, ನಮ್ಕೀನ್, ಸಂರಕ್ಷಿತ ಮಾಂಸ, ಟೂತ್‌ಬ್ರೆಷ್, ಸೈಕಲ್, ಪಾದರಕ್ಷೆ, ಬಟ್ಟೆಗಳು, ಹೇರ್ ಆಯಿಲ್, ಟಾಯ್ಲೆಟ್ ಸೋಪ್, ಸೋಪುಗಳು, ಅಡುಗೆ ಸಾಮಗ್ರಿ, ಬೆಡ್ ಶೀಟ್, ಟೂತ್‌ಪೇಸ್ಟ್, ಮಾರ್ಬಲ್, ಕರಕುಶಲ ವಸ್ತುಗಳು, ಚರ್ಮದ ಉತ್ಪನ್ನಗಳು, ಶಾಂಪೂ, ಕಾರ್ನ್ ಫ್ಲೇಕ್ಸ್, ಉಪ್ಪು, ಟೇಬಲ್, ಕುರ್ಚಿಗಳು, ನವೀಕರಿಸಬಹುದಾದ ಇಂಧನ, ರಸಗೊಬ್ಬರಗಳು, ಇದಷ್ಟೇ ಅಲ್ಲ, ಆಟೋಮೊಬೈಲ್ ಕ್ಷೇತ್ರಕ್ಕೂ ಜಿಎಸ್‌ಟಿ ಗುಡ್‌ನ್ಯೂಸ್ ಸಿಕ್ಕಿದೆ.

ಕಾರು, ಬೈಕ್, ಆಟೋಗಳ ಮೇಲಿನ ಜಿಎಸ್‌ಟಿಯೂ ಇಳಿಕೆಯಾಗಿದೆ. ಸಿಮೆಂಟ್, ಎಲ್ಲ ಮಾದರಿಯ ಟಿವಿ, ಎಸಿ, ಪ್ರಿಡ್ಜ್, 350 ಸಿಸಿ ಒಳಗಿನ ಮೋಟಾರ್ ಸೈಕಲ್, ಸಣ್ಣ ಕಾರುಗಳು, ಟ್ರ‍್ಯಾಕ್ಟರ್, ಬಸ್, ಟ್ರಕ್, ತ್ರಿಚಕ್ರವಾಹನ, ಆಟೋ ಬಿಡಿ ಭಾಗ, ಇನ್ನು ಕೆಲವು ಉತ್ಪನ್ನಗಳ ಮೇಲಿನ ಜಿಎಸ್‌ಟಿ ದರವನ್ನ ಕೇಂದ್ರ ಸರ್ಕಾರ ಹೆಚ್ಚಿಸಿದೆ. ಅವುಗಳು ಎಂದರೆ.. ಪಾನ್ ಮಸಾಲ, ಸಿಗರೇಟ್, ತಂಬಾಕು ಪದಾರ್ಥಗಳ ಮೇಲಿನ ಜಿಎಸ್‌ಟಿಯನ್ನ ಕೇಂದ್ರ ಸರ್ಕಾರ ಶೇಕಡ 40ಕ್ಕೆ ಏರಿಕೆ ಮಾಡಿದೆ. ತಂಪು ಪಾನೀಯಗಳು, ವೈಯಕ್ತಿಕ ಬಳಕೆಯ ವಿಮಾನ, ನಾನ್ ಆಲ್ಕೋಹಾಲ್ ಪಾನೀಯಗಳ ಮೇಲಿನ ಜಿಎಸ್‌ಟಿ ಏರಿಕೆಯಾಗಿದೆ.

ಇನ್ನೂ ಆರೋಗ್ಯ ವಲಯ ಮತ್ತು ಶೈಕ್ಷಣಿಕ ವಲಯಕ್ಕೆ ಕೇಂದ್ರ ಸರ್ಕಾರ ಬಿಗ್ ರಿಲೀಫ್ ಕೊಟ್ಟಿದೆ. ಝೀರೋ ಜಿಎಸ್‌ಟಿ ಘೋಷಣೆ ಮಾಡಿ ಗುಡ್‌ನ್ಯೂಸ್ ಕೊಟ್ಟಿದೆ. 33 ಜೀವರಕ್ಷಕ ಔಷಧಗಳು, ಕ್ಯಾನ್ಸರ್ ಔಷಧಗಳು, ಅಪರೂಪದ ಕಾಯಿಲೆಗಳ ಔಷಧಗಳು, ವೈಯಕ್ತಿಕ ಜೀವ ವಿಮೆ, ಆರೋಗ್ಯ ಪಾಲಿಸಿಗಳು, ಮ್ಯಾಪ್, ಚಾರ್ಟ್, ಗ್ಲೋಬ್‌ಗಳು, ಪೆನ್ಸಿಲ್‌ಗಳು, ಶಾರ್ಪನರ್, ಕ್ರಯೋನ್, ನೋಟ್‌ಬುಕ್‌ಗಳು, ಪ್ಯಾಸ್ಟೆಲ್‌ಗಳು, ಎರೇಸರ್‌ಗೆ ಜಿಎಸ್‌ಟಿ ಇಲ್ಲ, ಹಾಲು, ಪನೀರ್, ಪಿಜ್ಜಾ, ಬ್ರೆಡ್, ಚಪಾತಿ, ರೋಟಿ.

ಕೇಂದ್ರ ಸರ್ಕಾರದ ಈ ಜಿಎಸ್‌ಟಿ ಸ್ಲ್ಯಾಬ್ ನವರಾತ್ರಿ ಮೊದಲ ದಿನವಾದ ಸೆಪ್ಟೆಂಬರ್ 22 ರಂದು ಜಾರಿಯಾಗಲಿದೆ. ಈ ಮೂಲಕ ದೇಶವಾಸಿಗಳಿಗೆ ದಸರಾ, ದೀಪಾವಳಿ ಹಬ್ಬಕ್ಕೆ ನರೇಂದ್ರ ಮೋದಿ ಸರ್ಕಾರ ಶುಭ ಸುದ್ದಿ ನೀಡಿದೆ.

Leave a Reply

Your email address will not be published. Required fields are marked *

ದುಬೈ: ಅಕ್ಟೋಬರ್ 25 ರಂದು ದುಬೈನಲ್ಲಿ ದುಬೈ ಗಡಿನಾಡ ಉತ್ಸವ

ಮಂಗಳೂರು: ಅಶೋಕ ಜನಮನ ಕಾರ್ಯಕ್ರಮ ಆಯೋಜನೆ; ನೂಕು ನುಗ್ಗಲು ಉಂಟಾಗಿ ಅಸ್ವಸ್ಥರಾದ 11ಕ್ಕೂ ಹೆಚ್ಚು ಜನ…!

ಬಂಟ್ವಾಳ: ದ.ಕ.ಜಿಲ್ಲಾ ತುಳು ನಾಟಕ ಕಲಾವಿದರ ಒಕ್ಕೂಟ ವಾರ್ಷಿಕ ಮಹಾಸಭೆ; ನೂತನ ಅಧ್ಯಕ್ಷರಾಗಿ ಕಿಶೋರ್ ಡಿ.ಶೆಟ್ಟಿ ಪುನರಾಯ್ಕೆ….!

ಬಂಟ್ವಾಳ: ಮೊಡಂಕಾಪು ಆಯ್ಯಪ್ಪ ಮಂದಿರದಲ್ಲಿ ನಡೆದ ಸಭೆಯಲ್ಲಿ ಮೂರನೇ ಅವಧಿಯ ಅಧ್ಯಕ್ಷರಾಗಿ ಆಯ್ಕೆಯಾದ ಸುನಿಲ್ ಎನ್

ಬಂಟ್ವಾಳ: ಸುರಿದ ಮಳೆಗೆ ಅವರಣಗೋಡೆ ಕುಸಿದು ಬಿದ್ದು ಹಾನಿ…!

ಪುತ್ತೂರಿನ ಪ್ರಕರಣ, ಕಾರ್ಕಳದ ಅಭಿಷೇಕ್ ಆತ್ಮಹತ್ಯೆಗೆ ಸಂಬಂಧಿಸಿ ಗ್ರಹಸಚಿವರಿಗೆ ಐವನ್ ಡಿಸೋಜಾ ಅವರಿಂದ ಮನವಿ

ಮಂಗಳೂರು: ಪೊಲೀಸ್ ಠಾಣಾ ವ್ಯಾಪ್ತಿಯ ಮೂರು ಕಡೆ ಜಾನುವಾರು ವಧೆ…!

ಉಡುಪಿ: ಅಂಬಲಪಾಡಿಯಲ್ಲಿ ನೇಣಿಗೆ ಶರಣಾದ ಯುವಪ್ರೇಮಿಗಳು….!

ಮಂಗಳೂರು: ಮಾಧವ ಕೊಳತ್ತ ಮಜಲು ಅವರಿಗೆ ಕದ್ರಿ ಬಾಲಕೃಷ್ಣ ಶೆಟ್ಟಿ ಪ್ರಶಸ್ತಿ..!

error: Content is protected !!