ಉಡುಪಿ ಜಿಲ್ಲೆಯ ಬ್ರಹ್ಮಾವರದ ಲಾಡ್ಜ್ ನಲ್ಲಿ ಅಂದರ್ ಬಾಹರ್ ಆಡುತ್ತಿದ್ದ 11ಮಂದಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಹೇರಾಡಿ ಗ್ರಾಮದ ರಶ್ಮಿ ಬಾರ್ ಆಂಡ್ ಲಾಡ್ಜ್ ಕಟ್ಟಡದ 2ನೇ ಮಹಡಿಯ ರೂಮ್ ನಂಬ್ರ 203 ರಲ್ಲಿ ಅಂದರ್ ಬಾಹರ್ ಇಸ್ಪೀಟ್ ಜುಗಾರಿ ಆಟ ಆಡುತ್ತಿದ್ದ ವೇಳೆ ಬ್ರಹ್ಮಾವರ ಪೊಲೀಸರು ದಾಳಿ ಮಾಡಿದ್ದು, ಉತ್ತರಕನ್ನಡದ ವಿಶ್ವನಾಥ ಪೂಜಾರಿ ಭಟ್ಕಳ, ಬ್ರಹ್ಮಾವರ ಶಿರಿಯಾರ ನಿವಾಸಿ ಗಣೇಶ್ ಪೂಜಾರಿ, ವಾರಂಬಳ್ಳಿಯ ಕೇಶವ, ಉಳ್ಳೂರು ಗ್ರಾಮದ ಪ್ರಭಾಕರ ಶೆಟ್ಟಿ, ಕೋಟೇಶ್ವರ ಹಳವಳ್ಳಿಯ ಜಯರಾಜ್, ಸಾಲಿಗ್ರಾಮ ಪಾರಂಪಳ್ಳಿ ನಿವಾಸಿ ರಾಜು ಪೂಜಾರಿ, ಸೈಬ್ರಕಟ್ಟೆಯ ರಾಜೀವ್ ಶೆಟ್ಟಿ, ಸಾಲಿಗ್ರಾಮ ಕಾರ್ಕಡ ನಿವಾಸಿಗಳಾದ ರತ್ನಾಕರ, ಪ್ರಶಾಂತ್, ಕೋಟತಟ್ಟು ಗ್ರಾಮದ ಹರೀಶ್ ಮೋಗವೀರ ಹಾಗೂ ಸಿದ್ದಾಪುರ ತಾಲೂಕಿನ ನಿಡಗೋಡು ನಿವಾಸಿ ಲೋಹಿತ್ ಕುಪ್ಪಸ್ವಾಮಿ ಭೋವಿ ಎಂಬವರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ವಿಚಾರಣೆ ವೇಳೆ ಆರೋಪಿಗಳು ಹಣವನ್ನು ಪಣವನ್ನಾಗಿ ಇಟ್ಟುಕೊಂಡು ಅಂದರ್ ಬಾಹರ್ ಇಸ್ಪೀಟ್ ಜುಗಾರಿ ಆಡುತ್ತಿರುವುದನ್ನು ಒಪ್ಪಿಕೊಂಡಿದ್ದು, ಆರೋಪಿಗಳಿಂದ ಒಟ್ಟು ನಗದು ರೂ. 21080, ದ್ವಿಚಕ್ರ ವಾಹನಗಳನ್ನು ಸ್ವಾಧೀನಕ್ಕೆ ಪಡೆದುಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.



