“ಸರಕಾರಕ್ಕೆ ಮತಿಯಿಲ್ಲ- ಕಾರ್ಮಿಕರಿಗೆ ಗತಿಯಿಲ್ಲ!!!! ” ಭವತಿ ಬಿಕ್ಷಾಂ ದೇಹಿ” ಎಂಬ ಸ್ಲೋಗನ್ ನಡಿ “ಬಡ ಕಾರ್ಮಿಕರ ಧ್ವನಿಯಾಗಿ” ಜಿ.ಪಂ.ಮಾಜಿ ಸದಸ್ಯ ಎಂ.ತುಂಗಪ್ಪ ಬಂಗೇರರವರ ನೇತ್ರತ್ವದಲ್ಲಿ ಸೆ.11 ರಂದು ಗುರುವಾರ ಪುಂಜಾಲಕಟ್ಟೆಯಲ್ಲಿ ಬೃಹತ್ ಪ್ರತಿಭಟನೆ ನಡೆಸುವುದಾಗಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ಕಳೆದ 5 ತಿಂಗಳಿನಿಂದ ದ.ಕ.ಜಿಲ್ಲೆಯ ಕೂಲಿ ಕಾರ್ಮಿಕರಿಗೆ ಕೆಲಸವಿಲ್ಲದೆ ಕಂಗಾಲಾಗಿದ್ದಾರೆ. ಮರುಳು ಮತ್ತು ಕೆಂಪು ಕಲ್ಲು ಇಲ್ಲದೆ ಕಾರ್ಮಿಕರು ಊಟಕ್ಕಾಗಿ ಪರದಾಡುವ ಪರಿಸ್ಥಿತಿ ಉದ್ಭವವಾಗಿದೆ. ಅದಕೋಸ್ಕರ “ಭವತಿ ಬಿಕ್ಷಾ ದೇಹಿ” ಎನ್ನುವ ಹೋರಾಟದ ಮೂಲಕ, ಸರಕಾರದ ಗಮನಕ್ಕೆ ತರುವ ಕಾರ್ಯಕ್ಕೆ ಮುಂದಾಗಿದ್ದೇವೆ ಎಂದು ತಿಳಿಸಿದ್ದಾರೆ.

ಮಡಂತ್ಯಾರುವಿನಿಂದ ಪುಂಜಾಲಕಟ್ಟೆವರೆಗೆ ಪಾದಯಾತ್ರೆ ಮೂಲಕ ಸಾಗಿ ಪುಂಜಾಲಕಟ್ಟೆ ಆರಕ್ಷಕ ಠಾಣೆಯಲ್ಲಿ ಠಾಣಾಧಿಕಾರಿ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಲಾಗುವುದು. ಅ ದಿನ ಎಲ್ಲಾ ಅಂಗಡಿ ಮುಂಗಟ್ಟು ಗಳನ್ನು ಬೆಳಿಗ್ಗೆ 9-00ರಿಂದ 11-00 ರ ವರೆಗೆ ಸ್ವಯಂ ಪ್ರೇರಿತರಾಗಿ ಬಂದ್ ಮಾಡಿ ಸಹಕರಿಸಿಕರಿಸುವಂತೆ ಮತ್ತು ಕಾರ್ಯಕ್ರಮದ ಮುನ್ನ ಬೆಳಿಗ್ಗೆ 9-00ಪುಂಜಾಲಕಟ್ಟೆ ಗೋಪಾಲಕೃಷ್ಣ ದೇವಸ್ಥಾನ ವಠಾರ ದಲ್ಲಿ ಸೇರುವಂತೆ ಕೂಡ ಅವರು ಮನವಿ ಮಾಡಿದ್ದಾರೆ.



