ಉಡುಪಿ ಜಿಲ್ಲೆಯ ಕೆಂಜೂರು ಗ್ರಾಮದ ಬಲ್ಲೇಬೈಲು ಎಂಬ ಸರಕಾರಿ ಜಾಗದಲ್ಲಿ ಹಿಂಸಾತ್ಮಕವಾಗಿ ಕೋಳಿಗಳ ಕಾಲಿಗೆ ಕತ್ತಿಯನ್ನು ಕಟ್ಟಿ ಕೋಳಿ ಅಂಕ ಆಡುತ್ತಿದ್ದವರನ್ನು ಪೊಲೀಸರು ಬಂಧಿಸಿದ್ದಾರೆ.

ಕೆಲವರು ಗುಂಪು ಸೇರಿ ಕೋಳಿಗಳ ಕಾಲಿಗೆ ಬಾಳ್ ಕಟ್ಟಿ ಹಿಂಸ್ಮಾತಕವಾಗಿ ಅವುಗಳು ಕಾದಾಡುವಂತೆ ಮಾಡಿ ಅವುಗಳ ಮೇಲೆ ಹಣವನ್ನು ಪಣವಾಗಿ ಕಟ್ಟಿ ಗೆದ್ದ ಕೋಳಿಯ ಮಾಲಕ ಲಾಭಗಳಿಸುತ್ತಿರುವುದು ಕಂಡು ಬಂದಿದ್ದು ಪೊಲೀಸ್ ಇಲಾಖೆ ಅಲ್ಲಿಗೆ ದಾಳಿ ಮಾಡಿದ್ದಾಗಿ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಉಳಿದವರು ಕೋಳಿಗಳ ಕಾದಾಟವನ್ನು ನೋಡುತ್ತಾ ಕೋಳಿ ಅಂಕ ಜುಗಾರಿ ಆಟದಲ್ಲಿ ನಿರತರಾಗಿರುವುದನ್ನು ಖಚಿತಪಡಿಸಿಕೊಂಡು ಬ್ರಹ್ಮಾವರ ಪೊಲೀಸರು ದಾಳಿ ಮಾಡಿದ್ದಾರೆ. ಪೊಲೀಸರನ್ನು ಕಂಡು ಜನರು ಓಡಿಹೋಗಿದ್ದು, ಸಿಬ್ಬಂದಿಯವರ ಸಹಾಯದಿಂದ ಓಡಿ ಹೋಗುತ್ತಿದ್ದವರ ಪೈಕಿ ಇಬ್ಬರನ್ನು ಹಿಡಿದು ವಿಚಾರಿಸಲಾಗಿದೆ. ಪ್ರವೀಣ್ ಶೆಟ್ಟಿ ಮತ್ತುರಾಘವೇಂದ್ರ ಬಂಧಿತ ಆರೋಪಿಗಳಾಗಿದ್ದು, ಅವರಿಂದ ಆಟಕ್ಕೆ ಬಳಸಿದ ನಗದು 26030/- ರೂ ಹಾಗೂ ಸ್ಥಳದಲ್ಲಿ ಜೂಜಿಗೆ ಕಟ್ಟಿದ 2 ಕೋಳಿಗಳು, ಕೋಳಿಗಳ ಕಾಲಿಗೆ ಕಟ್ಟಿದ 2 ಕೋಳಿ ಬಾಳ್, ಕೋಳಿಯ ಕಾಲಿಗೆ ಕಟ್ಟಿದ 2 ನೈಲಾನ್ ಹಗ್ಗ ಪಂಚರ ಸಮಕ್ಷಮ ವಶಪಡಿಸಿಕೊಳ್ಳಲಾಗಿದೆ ಎಂದೂ ಪೊಲೀಸರು ತಿಳಿಸಿದ್ದಾರೆ.



