ತಾಲೂಕು ಕಾನೂನು ಸೇವೆಗಳ ಸಮಿತಿ ಬಂಟ್ವಾಳ, ವಕೀಲರ ಸಂಘ (ರಿ.) ಬಂಟ್ವಾಳ, ಶ್ರೀರಾಮ ಫೈನಾನ್ಸ್ ಲಿ.ಬಂಟ್ವಾಳ ಇವರ ಸಂಯುಕ್ತ ಆಶ್ರಯದಲ್ಲಿ ಕಾನೂನು ಮಾಹಿತಿ ಶಿಬಿರ ಹಾಗೂ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ನಿಧಿ ವಿತರಣೆ ಕಾರ್ಯಕ್ರಮ ಬಿಸಿರೋಡಿನ ಲಯನ್ಸ್ ಸೇವಾ ಮಂದಿರದಲ್ಲಿ ನಡೆದಿದೆ.

ಕಾರ್ಯಕ್ರಮವನ್ನು ಅಡಿಸನಲ್ ಸಿವಿಲ್ ಜಡ್ಜ್ ರಾಜೇಂದ್ರ ಪ್ರಸಾದ್ ಕೆ.ಎಸ್. ಉದ್ಘಾಟಿಸಿ ಕಾನೂನು ಮಾಹಿತಿಯನ್ನು ನೀಡಿ ಕಾರ್ಯಕ್ರಮಕ್ಕೆ ಶುಭಹಾರೈಸಿದ್ಧಾರೆ. ಕ್ಷೇತ್ರ ಶಿಕ್ಷಣಾಧಿಕಾರಿ ಮಂಜುನಾಥ್ ಅವರು ಮಾತನಾಡಿ, ಸಮಾಜದಲ್ಲಿ ಕಷ್ಟದಲ್ಲಿರುವ ಕಡುಬಡವರಿಗೆ ಸಹಾಯಮಾಡುವ ಕಾರ್ಯವನ್ನು ಮಾಡುವ ಸಂಸ್ಥೆಗೆ ಅಭಿನಂದನೆ ಸಲ್ಲಿಸಿ, ಶಿಕ್ಷಣದಿಂದ ಮಾತ್ರ ಉತ್ತಮ ಸಮಾಜ ನಿರ್ಮಾಣ ಸಾಧ್ಯ.ಶಿಕ್ಷಣ ಕ್ಷೇತ್ರಕ್ಕೆ ಸಂಬAಧಿಸಿದAತೆ ಪೂರಕವಾಗಿ ಸಹಾಯವನ್ನು ಮಾಡುವ ಚಿಂತನೆ ಒಳ್ಳೆಯ ಕಾರ್ಯ ಎಂದರು. ಬಳಿಕ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡಲಾಯಿತು ಇನ್ನು ಈ ಸಂದರ್ಭದಲ್ಲಿ ವಕೀಲರಾದ ಉಮೇಶ್ ಕುಮಾರ್ ವೈ, ರಾಜೇಶ್ ಬೊಲ್ಲುಕಲ್ಲು, ಉಮೇಶ್ ಆಚಾರ್ಯ ಸೇರಿದಂತೆ ಮತ್ತಿತರ ಪ್ರಮುಖರು ಉಪಸ್ಥಿತರಿದ್ದರು.



