ಹನಗೋಡು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯರ ಕೊರತೆಯಿಂದ ರೋಗಿಗಳು ಪರದಾಡುವಂತಾಗಿದೆ ಈ ಹಿಂದೆ ಇದ್ದ ಡಾ ಜೋಗೆಂದ್ರನಾಥ್ 24*7 ದಿನದ 24 ಗಂಟೆಗಳ ಕಾಲವೂ ರೋಗಿಗಳಿಗೆ ಲಭ್ಯವಿದ್ದರು. ಆದರೆ ಅವರ ಸೇವಾವಧಿ ಮುಗಿದ ಕಾರಣ ಹೊಸದಾಗಿ ವೈದ್ಯರನ್ನು ನೇಮಕ ಮಾಡಲಾಗಿದ್ದು ಸದರಿ ಇರುವ ವೈದ್ಯರು ಮಧ್ಯಾಹ್ನ 12 ಗಂಟೆಯಿ0ದ ಸಾಯಂಕಾಲ 8:00 ವರೆಗೆ ಆಸ್ಪತ್ರೆಯಲ್ಲಿದ್ದು ಇನ್ನುಳಿದ ಸಮಯದಲ್ಲಿ ವೈದ್ಯರಿಲ್ಲದೆ ಹಿರಿಯ ನಾಗರಿಕರು, ಮಕ್ಕಳು, ಮಹಿಳೆಯರು ಗಂಟೆಗಳ ಕಾಲ ಚಿಕಿತ್ಸೆಗಾಗಿ ಕಾದು ಕಾದು ಹೈರಾಣಾಗುವ ಸ್ಥಿತಿ ಉಂಟಾಗಿದೆ.

ಮೊದಲೇ ಹನಗೋಡು ಭಾಗದಲ್ಲಿ ಅಪಾರ ಮಳೆಯಿಂದ ಜನಗಳಿಗೆ ವೈರಲ್ ಫೀವರ್, ಟೈಫಾಯಿಡ್ ಅಂತಹ ಜ್ವರಗಳು ಹೆಚ್ಚಾಗಿ ಕಂಡುಬರುತ್ತಿರುವುದರಿ0ದ ರೋಗಿಗಳ ಸಂಖ್ಯೆ ಹೆಚ್ಚಾಗಿದೆ ಆಸ್ಪತ್ರೆಯಲ್ಲಿ ರಾತ್ರಿ 7:00 ರಿಂದ ಬೆಳಗ್ಗೆ 12 ಗಂಟೆಗೆ ವರೆಗೆ ವೈದ್ಯರಿಗಾಗಿ ಕಾಯಬೇಕಾಗಿದೆ. ಸುಮಾರು 43 ರಿಂದ 45 ಹಳ್ಳಿಗಳಿಂದ ಕೂಡಿರುವ ಹನಗೋಡು ಹೋಬಳಿಯಲ್ಲಿ ಹಾಡಿ ಜನಗಳು ಹೆಚ್ಚಾಗಿದ್ದು, ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಇಬ್ಬರು ವೈದ್ಯರ ಅವಶ್ಯಕತೆ ಇದ್ದು ಸದ್ಯದಲ್ಲೇ ಸಂಬ0ಧಪಟ್ಟ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಇದರ ಬಗ್ಗೆ ಗಮನವಹಿಸಿ ಮತ್ತೋರ್ವ ವೈದ್ಯರನ್ನು ನೇಮಕ ಮಾಡಿಕೊಡಬೇಕು ರೋಗಿಗಳಿಗೆ ಸಕಾಲದಲ್ಲಿ ಚಿಕಿತ್ಸೆ ದೊರೆಯುವಂತೆ ಮಾಡಬೇಕು. ಜೊತೆಗೆ ಆಸ್ಪತ್ರೆಯಲ್ಲಿ ಕಫ ಪರೀಕ್ಷೆ, ರಕ್ತ ಪರೀಕ್ಷೆ ಗಳಿಗೆ ಅನುಕೂಲವಾಗುವಂತೆ ಪರೀಕ್ಷಾ ಕೇಂದ್ರವನ್ನು ಆರಂಭಿಸಬೇಕು. ಹಾಗೂ ಈಗ ನೇಮಕ ಮಾಡಿರುವ ವೈದ್ಯರು ಡೇ ಸಮಯದಲ್ಲಿ ಬೆಳಿಗ್ಗೆ 10:00 ಗಂಟೆಯಿ0ದ ರಾತ್ರಿ 7:00 ವರಿಗಾದರೂ ಚಿಕಿತ್ಸೆ ನೀಡಬೇಕು ಎಂದು ಜನಗಳು ಮನವಿ ಮಾಡಿದ್ದಾರೆ.



