ಸರ್ಕ್ಯೂಟ್ ಹೌಸ್-ಬಿಜೈ ರಸ್ತೆ ಪಾದಚಾರಿ ಮಾರ್ಗದ ಮೇಲೆ ಬಿದ್ದಿರುವ ಗುಡ್ಡದ ಮಣ್ಣು ತಿಂಗಳೆರಡಾದರೂ ತೆರವಾಗಿಲ್ಲ.

ಸರ್ಕ್ಯೂಟ್ ಹೌಸ್‌ನಿಂದ ಬಿಜೈ ರಸ್ತೆಗೆ ಹೋಗುವ ಹೆದ್ದಾರಿಯಲ್ಲಿ ಭೂಕುಸಿತ ಸಂಭವಿಸಿ ಎರಡು ತಿಂಗಳೇ ಕಳೆದಿದೆ, ಆದರೆ ಆ ರೋಡ್‌ಗೆ ಬಿದ್ದಿರುವ ಮಣ್ಣು ಮಾತ್ರ ತೆರವಾಗದೆ ಅಲ್ಲೇ ಇದೆ. ಕಳೆದ ಜುಲೈ 16ರಂದು ಸುರಿದ ಭಾರೀ ಮಳೆಗೆ ಭೂಕುಸಿತ ಸಂಭವಿಸಿ ಸಂಚಾರಕ್ಕೆ ಅಡಚಣೆಯಾಗಿತ್ತು. ಈ ಮಣ್ಣು ತೆರವಾಗದೆ ಪಾದಚಾರಿ ಮಾರ್ಗ ಬಂದ್ ಆದ ಕಾರಣ, ಪಾದಚಾರಿಗಳು ರಸ್ತೆಯ ಮೇಲೆ ನಡೆಯುವ ದುಸ್ಥಿತಿ ಎದುರಾಗಿದೆ.

ಇಳಿಜಾರಾದ ಕಾರಣ ವಾಹನಗಳು ಈ ಮಾರ್ಗದಲ್ಲಿ ವೇಗವಾಗಿ ಸಾಗುತ್ತವೆ. ಆದಷ್ಟು ಬೇಗನೆ ಪಾದಚಾರಿ ಮಾರ್ಗದ ಮೇಲಿನ ಮಣ್ಣನ್ನು ತೆರವುಗೊಳಿಸಿ ಪಾದಚಾರಿಗಳ ಸುರಕ್ಷತೆಗೆ ಪಾಲಿಕೆ ಆದ್ಯತೆಯನ್ನು ನೀಡಬೇಕು. ಕೂಡಲೇ ಈ ಬಗ್ಗೆ ಅಧಿಕಾರಿಗಳು ಎಚ್ಚೆತು ಮುಂದೆ ಎದುರಾಗಬಹುದಾದ ಅಪಾಯವನ್ನು ತಡೆಯಬೇಕು ಎಂದು ನಾಗರಿಕರು ಆಗ್ರಹಿಸುತ್ತಿದ್ದಾರೆ.



