ವಿಟ್ಟ ಸಮೀಪದ ಅಳಿಕೆ ಎಂಬಲ್ಲಿ ಬೈಕಿನಲ್ಲಿ ಗಾಂಜಾ ಮಾರಾಟ ಮಾಡಲು ಯತ್ನಿಸುತ್ತಿದ್ದ ವಿಟ್ಲ ಪೋಲೀಸರು ಕಾರ್ಯಚರಣೆ ನಡೆಸಿ ಸೊತ್ತಗಳ ಸಹಿತ ಮೂವರು ಆರೋಪಿಗಳನ್ನು ವಶಕ್ಕೆ ಪಡೆದುಕೊಂಡ ಘಟನೆ ನಡೆದಿದೆ.

ವಿಟ್ಲ ಪೊಲೀಸ್ ಠಾಣಾ ಪೊಲೀಸ್ ಉಪನಿರೀಕ್ಷಕರಾದ ರಾಮಕೃಷ್ಣ ರವರು ಸಿಬ್ಬಂದಿಗಳೊಂದಿಗೆ ರೌಂಡ್ಸ್ ಕರ್ತವ್ಯದಲ್ಲಿರುವಾಗ ಬಂಟ್ವಾಳ ತಾಲೂಕು ಅಳಿಕೆ ಗ್ರಾಮದ ಎರುಂಬು ರಸ್ತೆ ಎಂಬಲ್ಲಿ ಒಂದು ದ್ವಿಚಕ್ರ ವಾಹನದೊಂದಿಗೆ ಅನುಮಾಸ್ಪದವಾಗಿ ಮತ್ತು ಸಂಶಯಾಸ್ಪದವಾಗಿ ನಿಂತುಕೊಂಡಿದ್ದ ವ್ಯಕ್ತಿಗಳನ್ನು ಕರೆದು ವಿಚಾರಿಸಿದಾಗ ಇವರು ಗಾಂಜಾ ಮಾರಾಟದ ಉದ್ದೇಶದಿಂದ ನಿಂತಿತುವುದು ಬೆಳಕಿಗೆ ಬಂದಿದೆ. ಮಂಗಳಪದವು ನಿವಾಸಿ ಸನತ್ ಕುಮಾರ್, ( 23) ಮಹಮ್ಮದ್ ರಾಝಿಕ್, (23 )ವರ್ಷ, ತಂದೆ- ಅಬ್ದುಲ್ ರಝಾಕ್ ಹಾಗೂ ಕೋಡಪದವು ನಿವಾಸಿ ಚೇತನ್ (23) ವರ್ಷ ಎಂಬವರನ್ನು ಬಂಧಿಸಲಾಗಿದೆ. ಬಂಧಿತರಿಂದ ಒಟ್ಟು 17000/- ರೂಪಾಯಿ ಮೌಲ್ಯದ ಸೊತ್ತುಗಳನ್ನು ವಶಕ್ಕೆ ಪಡೆಯಲಾಗಿದೆ. ಆರೋಪಿಗಳು ನಿಷೇಧಿತ ಮಾದಕ ವಸ್ತುವಾದ ಗಾಂಜಾವನ್ನು ಮೋಟಾರ್ ಸೈಕಲಿನಲ್ಲಿ ಅಕ್ರಮವಾಗಿ ಸ್ವಾಧೀನದಲ್ಲಿಟ್ಟುಕೊಂಡು ಗಿರಾಕಿಗಳಿಗೆ ಮಾರಾಟ ಮಾಡಲು ಪ್ರಯತ್ನಿಸುತ್ತಿದ್ದರು. ಬಂಧಿತ ಆರೋಪಿಗಳಿಂದ 6.27 ಗ್ರಾಂ ತೂಕದ ಗಾಂಜಾ, ಮೊಬೈಲ್ ಗಳು-3,ಹಾಗೂ KA19EA7018 ದ್ವಿಚಕ್ರ ವಾಹನವನ್ನು ಸ್ವಾಧೀನಪಡಿಸಿಕೊಂಡ ಪೋಲೀಸರು, ಆರೋಪಿಗಳ ವಿರುದ್ದ ಠಾಣಾ ಅಕ್ರ 126/2025 ಕಲಂ: 8(b), 20(b)(ii)(A) NDPS Act ಜೊತೆಗೆ 3(5) BNS 2023 ರಂತೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.



