ಈ ವರ್ಷದ ದಸರಾ ಹಬ್ಬದಲ್ಲಿ ಶಾರದಾ ದೇವಿಯ ಪಾತ್ರಧಾರಿಯಾಗಿ ಅನೇಕ ಪ್ರತಿಭೆಗಳು ಮಿಂಚಿವೆ. ಪುತ್ತೂರಿನ ಸುವರ್ಣ ಎಸ್ಟೇಟ್‌ನ ಉಜ್ವಲ ವಿ. ಸುವರ್ಣ ಇವರಲ್ಲೊಬ್ಬರು.

ಶಾರದಾ ದೇವಿಯ ದಿವ್ಯ ರೂಪವನ್ನು ಧರಿಸಿದ ಉಜ್ವಲ, ತನ್ನ ಶಾಂತ ಸ್ವಭಾವ ಮತ್ತು ದೈವಿಕ ಮೋಹಕತೆಯಿಂದ ಭಕ್ತರನ್ನು ಮಂತ್ರಮುಗ್ಧಗೊಳಿಸಿದ್ದಾರೆ. ಪುತ್ತೂರಿನ ನರಿಮೊಗರಿನ ವೇದನಾಥ್ ಸುವರ್ಣ ಮತ್ತು ನಳಿನಾಕ್ಷಿ ವಿ. ಸುವರ್ಣರವರ ಪುತ್ರಿಯಾಗಿರುವ ಉಜ್ವಲ ವಿ ಸುವರ್ಣ ಅವರ ದೇವತಾರೂಪದ ರೂಪಾಂತರ ತುಂಬಾ ದಿವ್ಯವಾಗಿತ್ತು ಎಂಬ ಶ್ಲಾಘನೆ ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಕ್ತವಾಗುತ್ತಿದೆ.

ಸುಳ್ಯ ಕೆವಿಜಿ ವಿದ್ಯಾಸಂಸ್ಥೆಯಲ್ಲಿ ದ್ವಿತೀಯ ವರ್ಷದ ದಂತ ವೈದ್ಯಕೀಯ ಪದವಿಯಲ್ಲಿ ಓದುತ್ತಿರುವ ಉಜ್ವಲ ವಿ ಅವರು ಭರತನಾಟ್ಯ, ನೃತ್ಯ ಸೇರಿದಂತೆ ವಿವಿಧ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ನಂಬರ್ ಪ್ಲೇಟ್ ಎನ್ನುವ ಚಿತ್ರದಲ್ಲಿ ಅವರು ನಟಿಸಿದ್ದರು.



