ದಕ್ಷಿಣ ಕನ್ನಡ :ಆರು ದಶಕಗಳಿಂದ ಪೌರೋಹಿತ್ಯ ವೃತ್ತಿ ಮಾಡಿಕೊಂಡು, ನೂರಾರು ಪುರೋಹಿತರನ್ನು ಬೆಳೆಸಿ ಸಮಾಜಕ್ಕೆ ಕೊಡುಗೆ ನೀಡಿದ, ಜನಾನುರಾಗಿ, ಮಿತಭಾಷಿ, ವೈದಿಕ ವಿದ್ವಾಂಸರು, ವೇದವಿಧಿ ಪಾರಂಗತ ವೇದ ವಿದ್ವಾನ್ ಬೇಂಗ್ರೋಡಿ ಮಾಧವ ಭಟ್ಟರು ವಿಧಿವಶರಾಗಿದ್ದಾರೆ ಎಂದು ವರದಿಯಾಗಿದೆ.

ಇತ್ತೀಚಿನ ದಿನಗಳಲ್ಲಿ ವಯೋ ಸಹಜ ಕಾಯಿಯಿಂದ ಬಳಲುತ್ತಿದ್ದ ಭಟ್ಟರು ಅನಾರೋಗ್ಯದ ದಿನಗಳಲ್ಲೂ ಸದಾಕಾಲ ಸೇವೆಗೆ ತನ್ನನ್ನು ಮುಡಿಪಾಗಿಟ್ಟ ಮಾಧಪ್ಪಣ್ಣನವರು ಇನ್ನು ನೆನಪು ಮಾತ್ರ. ಅವರಿಗೆ ಸುಮಾರು 74 ವರ್ಷ ವಯಸ್ಸಾಗಿತ್ತು. ಪತ್ನಿ,ಮೂವರು ಗಂಡು ಮಕ್ಕಳು, ಐದು ಜನ ಹೆಣ್ಣು ಮಕ್ಕಳು, ಅಪಾರ ಶಿಷ್ಯವರ್ಗ, ಅನೇಕ ಬಂಧು ಬಾಂಧವರು ಮತ್ತು ಹಿತೈಷಿಗಳನ್ನು ಹೊಂದಿರುವ ಭಟ್ಟರ ನಿಧನ ಸಮುದಾಯಕ್ಕೆ ತುಂಬಲಾರದ ನಷ್ಟ ಮತ್ತು ಈ ಅಗಲುವಿಕೆ ವೈದಿಕ ವಿಭಾಗದಲ್ಲಿ ಒಂದು ದೊಡ್ಡ ನಿರ್ವಾತ ಸೃಷ್ಟಿಸಿದೆ… ಎನ್ನುವುದು ಸಮುದಾಯದ ಅಭಿಪ್ರಾಯವಾಗಿದೆ ಸರ್ವಮಾನ್ಯ, ಸಜ್ಜನ, ಮೇಧಾವಿ, ಸರಳ, ಅತಿ ವಿರಳ ಸಾಕಾರಮೂರ್ತಿಯನ್ನು ಕಳೆದುಕೊಂಡಿದ್ದೇವೆ. ಮೃತರ ಆತ್ಮಕ್ಕೆ ವಿಷ್ಣು ಸಾಯುಜ್ಯ ಪ್ರಾಪ್ತಿಯಾಗಲಿ ಮತ್ತು ಅವರ ಅಗಲುವಿಕೆಯ ನೋವನ್ನು ಭರಿಸುವ ಶಕ್ತಿ ಮಕ್ಕಳು, ಪರಿವಾರ, ಬಂಧು-ಬಳಗ, ಅಪಾರ ಶಿಷ್ಯ ವೃಂದ ಮತ್ತು ಹಿತೈಷಿಗಳಿಗೆ ನೀಡಲಿ ಎನ್ನುವುದು ಸಮಾಜದ ಈ ಕ್ಷಣದ ಪ್ರಾರ್ಥನೆ…
 
								



