ಜೇಸಿಐ ಗಣೇಶಪುರ ದಶಮಾನೋತ್ಸವ ಸಂಭ್ರಮ 2025ರ ಪ್ರಯುಕ್ತ ವಾಲಿಬಾಲ್ ಪಂದ್ಯಾಟ ಅ.5 ರಂದು ಬೆಳ್ಳಿಗೆ 9 ಗಂಟೆಗೆ ಭಾರತಿ ಆಂಗ್ಲ ಮಾಧ್ಯಮ ಶಾಲೆ ಕುಳಾಯಿಯಲ್ಲಿ ನಡೆಯಲಿದೆ.

ಬೆಳ್ಳಿಗ್ಗೆ 9 ಗಂಟೆಗೆ ಉದ್ಘಾಟನಾ ಸಮಾರಂಭ ನಡೆಯಲಿದ್ದು, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಇನಾಯತ್ ಆಲಿ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಜೇಸಿಐ ಗಣೇಶಪುರದ ಘಟಕಾಧ್ಯಕ್ಷರು ಅಶ್ವಿನ್ ಶೇಖ ಕುಡುಂಬೂರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ಇನ್ನು ಸಮಾರೋಪ ಸಮಾರಂಭ ನಡೆಯಲಿದ್ದು, ಜೇಸಿಐ ಭಾರತ ವಲಯ 15 ಪ್ರಾಂತ್ಯ ಬಿ. ಯ ವಲಯಾಧ್ಯಕ್ಷರಾದ ಜೇಸಿಐ ಸೆನೆಟರ್ ಅಭಿಲಾಶ್ ಬಿ.ಎ ಹಾಗೂ ಲಕ್ಷ್ಮೀ ಕ್ರಯೋಜೆನಿಕ್ಸ್ ಬೈಕಂಪಾಡಿ ಇದರ ಮಾಲಕರಾದ ಎಂ. ಜೆ ಶೆಟ್ಟಿ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಇನ್ನು ಈ ಎಲ್ಲಾ ಕಾರ್ಯಕ್ರಮಗಳು ನಿಮ್ಮ ನೆಚ್ಚಿನ ಅಭಿಮತ ವಾಹಿನಿಯ ಯೂಟ್ಯೂಬ್ ಚಾನೆಲ್ ನಲ್ಲಿ ನೇರಪ್ರಸಾರಗೊಳ್ಳಲಿದೆ.



