ಕು0ದಾಪುರ ತಾಲೂಕಿನ ಗುಡ್ಡೆ ಅಂಗಡಿಯ ಮನೆಯೊಂದಕ್ಕೆ ನುಗ್ಗಿ ಚಿನ್ನಾಭರಣ ಕಳ್ಳತನ ಮಾಡಿದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಶಿರಿಯಾರ ಗ್ರಾಮದ ನಿವಾಸಿ ಆನಂದ ಬಂಧಿತ ಆರೋಪಿ. ಸುಮಾರು 18 ಗ್ರಾಂ ತೂಕದ ಅಂದಾಜು 1,45,000 ರೂ. ಮೌಲ್ಯದ ಚಿನ್ನದ ಸರವನ್ನು ಕಳ್ಳತನ ಮಾಡಲಾಗಿದ್ದು.

ಕೋಟ ಪೊಲೀಸ್ ಠಾಣೆಯ ಉಪನಿರೀಕ್ಷಕ ಪ್ರವೀಣ ಕುಮಾರ್ ಆರ್ ನೇತೃತ್ವದಲ್ಲಿ ಕಳ್ಳನನ್ನು ಬಂಧಿಸಿ ಚಿನ್ನದ ಸರವನ್ನು ವಶಪಡಿಸಿಕೊಂಡಿದ್ದಾರೆ.



